ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನ ಸಾರಿಗೆ ಸಂಪರ್ಕ ವ್ಯವಸ್ಥೆಯ ಜೀವನಾಡಿಯಾಗಿರುವ ನಮ್ಮ ಮೆಟ್ರೋದ ಪಿಂಕ್ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ನಮ್ಮ ಮೆಟ್ರೋ ಪಿಂಕ್ ಮಾರ್ಗದ ರೀಚ್ 6ರ ಅಂದರೆ ಕಾಳೇನ ಅಗ್ರಹಾರ – ನಾಗವಾರ ನಡುವಿನ ಮಾರ್ಗದಲ್ಲಿ ವೆಂಕಟೇಶಪುರ- ಕೆ.ಜಿ ಹಳ್ಳಿ ಸುರಂಗ ಕಾಮಗಾರಿ ಪೂರ್ಣಗೊಂಡಿದೆ.
ಈ ಸುರಂಗ ಕೊರೆಯುತ್ತಿದ್ದ ತುಂಗಾ ಸುರಂಗ ಕೊರೆಯುವ ಯಂತ್ರವು ಕಾಡುಗೊಂಡನ ಹಳ್ಳಿ (ಕೆಜಿ ಹಳ್ಳಿ)ಯಲ್ಲಿ ಹೊರಗೆ ಬಂದಿದೆ. ಬೆಂಗಳೂರು ಮೆಟ್ರೋದ ಅತಿ ಉದ್ದದ ಸುರಂಗ ಮಾರ್ಗ ಇದಾಗಿದ್ದು, ನಮ್ಮ ಮೆಟ್ರೋದ ಪಿಂಕ್ ಮಾರ್ಗದಲ್ಲಿದೆ. ಗುಲಾಬಿ ಮಾರ್ಗದ ಸುರಂಗ ಕೊರೆಯುವ ಕಾಮಗಾರಿ ಶೇಕಡ 90 ಪೂರ್ಣಗೊಂಡಂತಾಗಿದೆ.
Mumbai 26/11 Attacks: ಪಾಕ್ ಜೈಲಿನಲ್ಲೇ ವಿಷ ಪ್ರಾಶನಕ್ಕೆ ತುತ್ತಾಗಿರುವ ಮೋಸ್ಟ್ ವಾಂಟೆಡ್ ಉಗ್ರ..!
ವೆಂಕಟೇಶಪುರ- ಕೆ.ಜಿ ಹಳ್ಳಿ ಸುರಂಗ ಕಾಮಗಾರಿಯನ್ನು 2022ರ ಅಕ್ಟೋಬರ್ನಲ್ಲಿ ಶುರುಮಾಡಲಾಗಿತ್ತು. ಈ ಸುರಂಗ ಮಾರ್ಗ 1.184.4 ಮೀಟರ್ ಉದ್ದ ಇದೆ. ಪಿಂಕ್ ಮಾರ್ಗದಲ್ಲಿ 24 ಸುರಂಗ ಮಾರ್ಗ ಇದ್ದು, ಈ ಪೈಕಿ 21 ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ.