ಮಹದೇವಪುರ: ಕರ್ನಾಟಕ ರಾಜ್ಯ ಖೋ- ಖೋ ಸ್ಪೋರ್ಟ್ಸ್ ಸಂಸ್ಥೆ ಹಾಗೂ ಗುಂಜೂರು ಖೋ- ಖೋ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಅತಿ ಕಿರಿಯ ಬಾಲಕ ಬಾಲಕಿಯರ ಹೊನಲು ಬೆಳಕಿನ ಖೋ ಖೋ ಸ್ಪರ್ಧೆಯಲ್ಲಿ ಗುಂಜೂರು ಖೋ-ಖೋ ಸ್ಪೋರ್ಟ್ಸ್ ಕ್ಲಬ್ ನ ಬಾಲಕಿಯರು ಮತ್ತು ಬೆಂಗಳೂರು ಪೈನೀಯಿರ್ಸ್ ನ ಬಾಲಕರು ಪ್ರಥಮಸ್ಥಾನ ಪಡೆದಿದ್ದಾರೆ.
ರಾಜ್ಯ ಮಟ್ಟದ ಖೋ- ಖೋ ಸ್ಪರ್ಧೆಯ ಕ್ರೀಡಾ ಕೂಟದಲ್ಲಿ ಬೆಂಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ. ಮೈಸೂರು, ಮಂಡ್ಯ, ತುಮಾಕೂರು ರಾಯಚೂರು, ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ 102 ತಂಡಗಳು ಭಾಗವಹಿಸಿದ್ದವು.
ಬಾಲಕಿಯರ ವಿಭಾಗದ ಪೈನಲ್ ಪಂದ್ಯದಲ್ಲಿ ಟಿ.ನರಸೀಪುರ ತಂಡ ಮತ್ತು ಗುಂಜೂರು ಖೋ- ಖೋ ಸ್ಪೋರ್ಟ್ಸ್ ಕ್ಲಬ್ ನ ಬಾಲಕಿಯರ ತಂಡ ಸೆಣಸಾಡಿ ಅಂತಿಮವಾಗಿ ಗುಂಜೂರು ಖೋ- ಖೋ ಸ್ಪೋರ್ಟ್ಸ್ ಕ್ಲಬ್ ನ ಬಾಲಕಿಯರು ಪ್ರಥಮ ಸ್ಥಾನ ಪಡೆದರೆ ಟಿ.ನರಸೀಪುರದ ಬಾಲಕಿಯರ ತಂಡವು ದ್ವೀತಿಯ ಸ್ಥಾನ ಪಡೆಯಿತು.
ಬಾಲಕರ ವಿಭಾಗದಲ್ಲಿ ಅಂತಿಮ ಪಂದ್ಯದಲ್ಲಿ ಎಮ್ ಎಸ್ ಸಿ ನಾಗನೂರು ತಂಡ ಹಾಗೂ ಬೆಂಗಳೂರು ಪೈನೀಯಿರ್ಸ್ ನ ಬಾಲಕರು ಆಟವಾಡಿ ಬೆಂಗಳೂರು ಪೈನೀಯಿರ್ಸ್ ನ ಬಾಲಕರು ತಂಡ ಪ್ರಥಮ ಸ್ಥಾನ ಹಾಗೂ ಎಮ್ ಎಸ್ ಸಿ ನಾಗನೂರು ತಂಡ ದ್ವಿತೀಯ ಸ್ಥಾನ ಪಡೆದಿದೆ.
ಈ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ಮುಂದಿನ ತಿಂಗಳು ನಡೆಯುವ ರಾಷ್ಟ್ರದ ಮಟ್ಟದ ಖೋ- ಖೋ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಖೋ- ಖೋ ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಆರ್ ಜಯರಾಮ್ ತಿಳಿಸಿದರು.
ಈ ಸಂದರ್ಭದಲ್ಲಿ ರಮೇಶ್, ಬಾಬು,ಜಿಟಿ ನಾಗೇಶ್, ರಾಜಗೋಪಾಲ, ಬಾಬು ಗೌಡ ಇದ್ದರು