ಬೆಂಗಳೂರು: ಯುವತಿಯರನ್ನು ಮಾಡೆಲ್ ಮಾಡುತ್ತೇನೆಂದು ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರಪಂಚನಪ್ಪ ಎಂಬುವವನಿಂದ ಈ ವಂಚನೆ ನಡೆದಿದ್ದು, ಈತ ಟೀನೆಜ್ ಹುಡುಗಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಅಲ್ಲದೇ ನಕಲಿ ಇನ್ ಸ್ಟಗ್ರಾಮ್ ಖಾತೆ ತೆರೆದು ಸುಮಾರು 25 ಅಧಿಕ ಯುವತಿಯರಿಗೆ ವಂಚನೆ ಮಾಡಿದ್ದಾನೆ.
ತಾನು ಮಾಡೆಲಿಂಗ್ ಆಗಿ ಕೆಲಸ ಮಾಡುತ್ತಿದ್ದೇನೆ. ನಿಮ್ಮನ್ನು ಸಹ ಮಾಡೆಲ್ ಮಾಡುವೆ ಎಂದು ಯುವತಿಯರ ಫೋಟೋಗಳನ್ನು ತರಿಸಿಕೊಳ್ಳುತ್ತಿದ್ದನು. ನಂತರ ಈ ಫೋಟೋಗಳನ್ನು ಮಾರ್ಪಿಂಗ್ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತಿದ್ದ ಎನ್ನಲಾಗಿದೆ. ಸದ್ಯ ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕನ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
