ಬೆಂಗಳೂರು:- ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಪಟಾಕಿ ಮಾರಾಟ ಮಾಡಲು ರೂಲ್ಸ್ ಮೇಲೆ ರೂಲ್ಸ್ ಜಾರಿಗೆ ತರಲಾಗುತ್ತಿದೆ.
ನಗರದ 63 ಮೈದಾನಗಳಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಿದ್ರೆ ಕೇಸ್ ಬೀಳಲಿದೆ. ಪಟಾಕಿ ಮಳಿಗೆಗೆ ಒಟ್ಡು 912 ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಸದ್ಯ 63 ಮೈದಾನಗಳಲ್ಲಿ ಮಾತ್ರ ಮಾರಾಟ ಮಾಡಬೇಕು.
ಪಟಾಕಿ ಮಾರಲು ಕೆಳಕಂಡ ರೂಲ್ಸ್ ಅನ್ವಯ:
-ಹಸಿರು ಪಟಾಕಿ ಮಾರುವುದು ಕಡ್ಡಾಯ,
-ಹಸಿರು ಪ್ಯಾಕೆಟ್ಗಳ ಮೇಲೆ ಹಸಿರು ಪಟಾಕಿ ಚಿಕ್ಕ ಕ್ಯೂಆರ್ ಕೋಡ್ ಕಡ್ಡಾಯ
-ಮಳಿಗೆಗಳ ವಿಸ್ತೀರ್ಣ 10×10 ಅಡಿ ಸೀಮಿತ
-ನಿಗದಿಗಿಂತ ಹೆಚ್ಚು ಪ್ರಮಾಣದ ಪಟಾಕಿ ದಾಸ್ತಾನು ಮಾಡುವಂತಿಲ್ಲ
-ಸಾಧ್ಯವಾದಷ್ಟೂ ಬೆಂಕಿ ತಡೆಯುವ ಉಪಕರಣಗಳನ್ನೇ ಬಳಸಿ ಮಳಿಗೆ ನಿರ್ಮಿಸಬೇಕು
-ಮಳಿಗೆ ಮುಂಭಾಗ ಹಾಗೂ ಹಿಂಭಾಗ ಪ್ರವೇಶಿಸುವ ಅವಕಾಶ ಇರಬೇಕು
-ಪ್ರತಿ ಮಾರಾಟ ಮಳಿಗೆಗೆ 3 ಮೀಟರ್ ಅಂತರ ಕಡ್ಡಾಯ
-ಪರವಾನಗಿ ಪತ್ರ ಮಳಿಗೆಯಲ್ಲಿ ಪ್ರದರ್ಶಿಸಬೇಕು
-ಪರವಾನಗಿದಾರರು ಮಳಿಗೆಯಲ್ಲಿ ಕಡ್ಡಾಯವಾಗಿ ಇರಬೇಕು.
-ಪ್ರತಿ ಮಾರಾಟ ಮಳಿಗೆ ಯಲ್ಲಿ ಅಗ್ನಿಶಮನ ವ್ಯವಸ್ಥೆ ಇರಬೇಕು.
-ಮಳಿಗೆ ಸಮೀಪ ಧೂಮಪಾನಕ್ಕೆ ಅವಕಾಶವಿಲ್ಲ.
-ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ
-ರಾತ್ರಿ ವೇಳೆ ಯಾರೂ ಮಳಿಗೆಯಲ್ಲಿ ಮಲಗದಂತೆ ಎಚ್ಚರ ವಹಿಸಬೇಕು
-ಎಲೆಕ್ಟಿಕಲ್ ವೈರಿಂಗ್ ಮತ್ತು ಫಿಟ್ಟಿಂಗ್ಸ್ ವ್ಯವಸ್ಥೆ ಮಾಡಿಕೊಂಡಿರಬೇಕು
-ಪರವಾನಗಿ ಪಡೆದಿರುವ ದಿನಾಂಕ, ಸ್ಥಳದಲ್ಲಿ ಮಾತ್ರವೇ ಮಾರಾಟಕ್ಕೆ ಅವಕಾಶ
-ವಿದೇಶಿ ತಯಾರಿಕ ಪಟಾಕಿ ಮಾರಾಟಕ್ಕೆ ನಿರ್ಬಂಧ
-ಪಟಾಕಿಯನ್ನು 18 ವರ್ಷದೊಳಗಿನ ಮಕ್ಕಳಿಗೆ ಮರಾಟ ಮಾಡುವಂತಿಲ್ಲ