ಬೀದರ್:- ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಜ್ಯೋತಿ ತಾಂಡದಲ್ಲಿ ಆನ್ಲೈನ್ ಗೇಮ್ ಹುಚ್ಚಾಟದಿಂದ ಲಕ್ಷಾಂತರ ರೂ. ಸಾಲ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ.
ಹೊಸವರ್ಷಕ್ಕೆ ಕಂಡೀಷನ್ ಅಪ್ಲೈ: ಡ್ರಂಕ್ & ಡ್ರೈವ್ ಮಾಡಿ ಖಾಕಿಗೆ ತಗ್ಲಾಕ್ಕೊಂಡ್ರೆ ಕ್ಯಾನ್ಸಲ್ ಆಗುತ್ತೆ ಲೈಸನ್ಸ್!
ವಿಜಯ್ಕುಮಾರ್ ಜಗನ್ನಾಥ ಹೊಳ್ಳೆ ಮೃತ ದುರ್ದೈವಿ. ಎರಡು ದಿನಗಳ ಹಿಂದೆ ಮೈಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಎರಡೂ ದಿನಗಳ ಕಾಲ ನರಳಾಡಿ ಇಂದು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.
ಮೃತ ಯುವಕ ಬಿ.ಫಾರ್ಮಸಿ ಪದವೀಧರನಾಗಿದ್ದು, ಆನ್ಲೈನ್ ಗೇಮ್ ಹುಚ್ಚಿಗೆ ಬಿದ್ದು 5 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ. ಇದಕ್ಕೂ ಮುನ್ನ 10 ಲಕ್ಷ ರೂ. ಸಾಲ ಮಾಡಿದ್ದ, ಅದನ್ನು ಆತನ ಕುಟುಂಬಸ್ಥರು ತೀರಿಸಿದ್ದರು. ಅದಾದ ಬಳಿಕ ಮತ್ತೆ 5 ಲಕ್ಷ ರೂ. ಸಾಲ ಮಾಡಿದ್ದನು. ಈ ವಿಷಯ ಮನೆಯಲ್ಲಿ ಗೊತ್ತಾದರೆ ತೊಂದರೆ ಆಗುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.