ಬೆಂಗಳೂರು: ಸ್ಯಾಂಡಲ್ ವುಡ್ ನಿಂದ ನೈತಿಕ ಬೆಂಬಲ ಬೇಡ, ಬಂದ್ ನಲ್ಲಿ ಭಾಗವಹಿಸಬೇಕು ಎಂದು ಸಾ.ರಾ ಗೋವಿಂದು ಹೇಳಿಕೆ ನೀಡಿದ್ದಾರೆ. ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ನೀಡುವುದಾಗಿ ಫಿಲ್ಮ್ ಛೇಂಬರ್ ನಿರ್ಧಾರ ಮಾಡಿದೆ. ಈ ಸಂಬಂಧ ಮಾತನಾಡಿದ ಅವರು, ನಮಗೆ ನೈತಿಕ ಬೆಂಬಲ ಬೇಡ. ಬಂದ್‌ನಲ್ಲಿ ಬಂದು ಭಾಗವಹಿಸಬೇಕು. ಎಷ್ಟು ದಿನ ದಬ್ಬಾಳಿಕೆ ಸಹಿಸಿಕೊಂಡು ನಾವಿರಬೇಕು.? ನೀವು ಕನ್ನಡಿಗರಲ್ವಾ..? ಬನ್ನಿ ಎಲ್ಲರೂ ಸೇರಿ ಬಂದ್ ಯಶಸ್ವಿಗೊಳಿಸಬೇಕು ಎಂದು ಸ್ಯಾಂಡಲ್ ವುಡ್ ಕಲಾವಿದರಿಗೆ ಸಾರಾ ಗೋವಿಂದು ಕರೆ ನೀಡಿದ್ದಾರೆ.
