ಬೆಂಗಳೂರು: ಡಿಸೆಂಬರ್ 31 ರಂದು ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಈ ಹಿನ್ನೆಲೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಲ್ಲಾ ಸಂಸ್ಥೆಗಳಿಂದ ಬೆಂಬಲ ಕೇಳಿದ್ದಾರೆ. ಅದರಂತೆ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಮಾಜಿ ಶಾಸಕರ ಪುತ್ರ ಗುರು ದೇವ್ ನಾರಾಯಣ್ ಅವರನ್ನು ವಾಟಾಳ್ ನಾಗರಾಜ್ ಭೇಟಿ ಮಾಡಿದ್ದಾರೆ. ಸದಾಶಿವ ನಗರದ ಪೊಲೀಸ್ ಠಾಣೆಯಲ್ಲಿ ಭೇಟಿ ಮಾಡಿದ್ದು, ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.
