ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೆ ಅಲೆ ಮತ್ತು ಒಮಿಕ್ರಾನ್ ಭೀತಿಗೆ ಈಗಾಗಲೇ ಚಾಲನೆ ಸಿಕ್ಕಿಯಾಗಿದೆ. ಇವತ್ತು, ನಾಳೆ ಲಾಕ್ಡೌನ್ ಆಗುತ್ತೆ ಅಂತ ಜನರು ಲೆಕ್ಕಾಚಾರ ಮಾಡತೊಡಿದ್ದಾರೆ. ಈ ನಡುವೆ ಜನಪ್ರತಿನಿಧಿಗಳ ಈ ಅವಿವೇಕದ ವರ್ತನೆ ಅವರನ್ನು ಸಾಕಷ್ಟು ಆಕ್ರೋಶಕ್ಕೆ ಈಡು ಮಾಡಿದೆ. ರಾಜಧಾನಿಯಲ್ಲಿ ಕೋವಿಡ್ ಕೇಸ್ಗಳ ಓಟ ಮುಂದುವರೆದಿದ್ದು 12000 ಗಡಿಯನ್ನು ದಾಟಿದೆ. ಇನ್ನು ಪಾಸಿಟಿವಿಟಿ ರೇಟ್ ಶೇ.6ರನ್ನು ದಾಟಿ ದಾಪುಗಾಲಿಡುತ್ತಿದೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷರ ಪಾದಯಾತ್ರೆ.ಮತ್ತು ಇತರ ಪಕ್ಷದ ನಾಯಕರು ಬಹಿರಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೋವಿಡ್ಗೆ ನಿಯಮಗಳಿಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ.
ಸಾಕಷ್ಟು ವಿರೋಧದ ನಡುವೆ ಕಾಂಗ್ರೆಸ್ ನಾಯಕರ ಬಹುನೀರಿಕ್ಷಿತ ಮೇಕೆದಾಟು ಪಾದಯಾತ್ರೆಗೆ ನಿನ್ನೆಯಿಂದ ಚಾಲನೆ ಸಿಕ್ಕಿದೆ. ಮಾಸ್ಕ್ ಧರಿಸುತ್ತೇವೆ, ಕೋವಿಡ್ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತು ಕೊಟ್ಟು ಪಾದಯಾತ್ರೆ ಕೈಗೊಂಡಿದ್ದಾರೆ. ಚಾಲನೆ ಸಿಕ್ಕಿದ್ದೆ ತಡ ಕೋವಿಡ್ ಮಾರಕ ಇನ್ನು ಅಸ್ತಿತ್ವದಲ್ಲಿದೆ ಎಂಬುದನ್ನು ಮರೆತು ಯಾವ ಮಾರ್ಗಸೂಚಿಗಳನ್ನು ಪಾಲಿಸದೇ ಪಾದಯಾತ್ರೆಯಲ್ಲಿ ತೊಡಗಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
