ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿ ಆಯಿಲ್ ಚೆಲ್ಲಿದ್ದ ಹಿನ್ನೆಲೆ ಸುಮಾರು 10 ಕ್ಕು ಹೆಚ್ಚು ವಾಹನ ಸವಾರರು ಬಿದ್ದು ಪರದಾಟ ನಡೆಸಿದ ಘಟನೆ ಜರುಗಿದೆ.
ರಾತ್ರಿ ವೇಳೆ ಆಯಿಲ್ ಚೆಲ್ಲಿದ್ದರಿಂದ ವಾಹನ ಸವಾರರು ಓಡಾಡುವ ಸಂದರ್ಭದಲ್ಲಿ ಜಾರಿ ಬೀಳುತ್ತಿದ್ದಾರೆ. ಕೂಡಲೇ ಸ್ಥಳೀಯರ ಮಾಹಿತಿ ಆಧರಿಸಿ ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಲ್ಲದೇ ಆಯಿಲ್ ಚೆಲ್ಲಿರುವ ಜಾಗದಲ್ಲಿ ಮಣ್ಣು ಹಾಕಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.