ಹುಬ್ಬಳ್ಳಿ:- ತಾಲೂಕಿನ ಕಿರೆಸೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ GJ 05 JB7162 ಕಾರನ್ನು ಕರ್ತವ್ಯದಲ್ಲಿ ಹಾಜರಿದ್ದ ಮ್ಯಾಜಿಸ್ಟ್ರೇಟ್ ರಮಜಾನಸಾಬ ಕಿಲ್ಲೇದಾರ , ಎಸ್ ಎಸ್ ಟಿ ಹಾಗೂ ಎಫ್ ಎಸ್ ಟಿ 3 ರ, ನಾಗಾ ನಾಯ್ಕ ,ಪೋಲೀಸ್ ಸಿಬ್ಬಂದಿಗಳು ತಡೆದು ತಪಾಸಣೆ ಮಾಡಿದಾಗ ಕಾರಿನಲ್ಲಿ ಓಂಪ್ರಕಾಶ್ ಎನ್ನುವವರಿಗೆ ಸೇರಿದ್ದ ದಾಖಲೆ ಇರದ 3,82,000 ರೂಪಾಯಿ ನಗದು ಇರುವುದು ಕಂಡುಬಂದಿದ್ದು, ನಿಯಮಾನುಸಾರ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಆಗಿರುವ ಹು-ಧಾ ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಂಸಿಸಿ ನೋಡೆಲ್ ಅಧಿಕಾರಿ ರವೀಂದ್ರ ಕುಮಾರ್, ಪೋಲೀಸ್ ಇನ್ಸ್ಪೆಕ್ಟರ್ ಕಿರಣ್ ಕುಮಾರ,ಎ.ಎಸ್.ಐ ಆರ್ ಜಿ ನಾಯ್ಕ, ಎಎಸ್ ಐ ಜಿ.ಸಿ.ಕಡೇಮನಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಶಪಡಿಸಿಕೊಂಡಿರುವ ದಾಖಲೆ ಇಲ್ಲದ ಹಣವನ್ನು ತಕ್ಷಣೆ ಖಜಾನೆಯಲ್ಲಿ ಡಿಪಾಜಿಟ್ ಮಾಡಲಾಗಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾ ಸೀಜರ್ ಕಮಿಟಿಗೆ ವರದಿ ಸಲ್ಲಿಸಲಾಗಿದೆ ಎಂದು ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ.