ಕಲಬುರಗಿ: ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಡಿಸಿ ಗೈರಾದ ಹಿನ್ನಲೆ ಭೋವಿ ಸಮಾಜ ತೀವ್ರ ಆಕ್ರೋಶ ಹೊರಹಾಕಿ ಕಾರ್ಯಕ್ರಮ ಬಹಿಷ್ಕರಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಪಂಡಿತ್ ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ DC ಫೌಜಿಯಾ ತರನ್ನುಮ್, ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಅನೇಕರು ಗೈರಾಗಿದ್ರು.
ಮಧ್ಯಾನ 12 ಗಂಟೆಗೆ ಜಯಂತ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು ಆದರೆ 1 ಗಂಟೆಯಾದರೂ ಸಮಾರಂಭಕ್ಕೆ ಅಧಿಕಾರಿಗಳು ಬಂದಿರಲಿಲ್ಲ ಹೀಗಾಗಿ ಮಠಾಧೀಶರು ಸಮಾಜದ ಬಾಂಧವರು ಕಾರ್ಯಕ್ರಮ ಬಹಿಷ್ಕಿರಿಸಿ ದಿಡೀರ್ ಪ್ರತಿಭಟನೆ ಮಾಡಿದ್ರು.ಮಾತ್ರವಲ್ಲ ರಸ್ತೆತಡೆ ನಡೆಸಿದ್ರು. ಕೊನೆಗೆ ಶಾಸಕ ಅಲ್ಲಮ ಪ್ರಭು ಪಾಟೀಲ್ ಎಲ್ಲರ ಮನವೊಲಿಸಿ ಪ್ರತಿಭಟನೆ ಕೈ ಬಿಡುವಂತೆ ಮಾಡಿದ್ರು..