ಬೆಂಗಳೂರು: ಶಾಲೆಗಳಿಗೆ ಮೆಟಲ್ ಡಿಟೆಕ್ಟರ್ ಅಳವಡಿಸುವಂತೆ ಶಾಲೆಗಳಿಗೆ ನೊಟೀಸ್ ನೀಡಲಾಗಿದ್ದು ಪೊಲೀಸ್ ಇಲಾಖೆ ಆದೇಶಕ್ಕೆ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಆಕ್ರೋಶಗೊಂಡಿದೆ.
ಶಾಲೆಗಳಲ್ಲಿ ಕಡ್ಡಾಯವಾಗಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡುವಂತೆ ಆದೇಶ ಹೊರಡಿಸಿದ ಪೊಲೀಸ್ ಇಲಾಖೆ ವಿರುದ್ಧ ಕಿಡಿಕಾರಿದ್ದು ಕೆ.ಪಿ. ಅಗ್ರಹಾರ ಪೊಲೀಸ್ ಠಾಣಾ ಅಧಿಕಾರಿಗಳಿಂದ ನೊಟೀಸ್ ನೀಡಲಾಗಿದೆ.
ಮಾಗಡಿ ರಸ್ತೆಯ ಗುರುಕುಲ ಇಂಟರ್ನ್ಯಾಷನಲ್ ಶಾಲೆಗೆ ನೋಟೀಸ್ ನೀಡಲಾಗಿದ್ದು ಪಬ್ಲಿಕ್ ಸೇಫ್ಟ್ ಆಕ್ಟ್ ಅಡಿ ಶಾಲೆಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡುವಂತೆ ನೊಟೀಸ್ ಕೊಡಲಾಗಿದೆ. ಶಾಲೆಗಳು ಪಬ್ಲಿಕ್ ಸೇಫ್ಟ್ ಆಕ್ಟ್ ನಲ್ಲಿ ಬರೋದಿಲ್ಲ ಅಂತಿರೋ ಖಾಸಗಿ ಶಾಲಾ ಮಾಲೀಕರ ಸಂಘ
ಶಿಕ್ಷಣ ಇಲಾಖೆಯಿಂದ ಈ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ ಇಂತಹ ಯಾವುದೇ ಸೂಚನೆ ನೀಡಿಲ್ಲ ಅಂತಿರೋ ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆ ಆದೇಶಕ್ಕೂ ಶಿಕ್ಷಣ ಇಲಾಖೆಗೂ ಸಂಬಂಧವಿಲ್ಲ ಅಂತ ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟನೆ