ಬೆಂಗಳೂರು: ಫೈಟರ್ ರವಿ ಒಂದು ಕಾಲದಲ್ಲಿ ಫೀಲ್ಡಲ್ಲಿ ಹೆಸರು ಮಾಡಿದ್ದ ಆಸಾಮಿ.. ನಾಗಮಂಗಲದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಟಿಕೆಟ್ ಕೈತಪ್ಪಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸದ್ದು ಮಾಡಿದ್ದ.. ಇದೀಗ ಐಟಿ ದಾಳಿಯಾಗಿ ಸಿಸಿಬಿಯ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಹೀಗೆ ಮಾತನಾಡುತ್ತಾ ನಿಂತಿರೋ ಇವರ ಹೆಸರು ಬಿಎಂ ಮಲ್ಲಿಕಾರ್ಜುನ.. ಹೀಗಂದ್ರೆ ಇವ್ರು ಯಾರು ಅನ್ನೋದು ಯಾರಿಗೂ ತಿಳಿಯೋದಿಲ್ಲ..
ಫೈಟರ್ ರವಿ ಅಂದ್ರೆನೆ ಎಲ್ಲಾರಿಗೂ ಗೊತ್ತಾಗೊದು.. ರವಿ ಇದೀಗ ಮತ್ತೆ ಸುದ್ದಿಯಲ್ಲಿರೋಕೆ ಕಾರಣ ಮೊನ್ನೆ ಮೊನ್ನೆಯಷ್ಟೇ ತೆರಿಗೆ ವಂಚನೆ ಆರೋಪದ ಮೇಲೆ ಐಟಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದರು.. ಈಗ ಸಿಸಿಬಿಯ ದೃಷ್ಟಿ ಸಹ ಫೈಟರ್ ರವಿ ಮೇಲೆ ಬಿದ್ದಿದ್ದು ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಗೋಡಂಬಿ ವ್ಯವಹಾರದ ವಂಚನೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ಗಂಟೆಗಟ್ಟಲೆ ಕಾದು ಫೈಟರ್ ರವಿ ಮನೆಗೆ ಬಂದಾಗ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ.
iPhone 16 ಲೈನ್ಅಪ್ ಬಗ್ಗೆ ನಿಮಗೇನು ಗೊತ್ತು?: A18 ಚಿಪ್ ಯಾಕೆ ಹಾಕ್ತಾರೆ ಗೊತ್ತಾ?
ಇನ್ನು ನನ್ನ ಮೇಲೆ ಯಾವ ಪ್ರಕರಣ ದಾಖಲಾಗಿದೆ ಎಂಬುದರ ಮಾಹಿತಿ ತನಗಿಲ್ಲ. ಸಿಸಿಬಿ ನೀಡಿರುವ ನೋಟೀಸ್ ರಾಜಕೀಯ ಪ್ರೇರಿತವಾಗಿರುವಂಥದ್ದು ಎನ್ನಿಸುತ್ತಿದೆ. ನೋಟೀಸ್ ವಿಚಾರವನ್ನು ನಮ್ಮ ವಕೀಲ ಬಳಿ ಚರ್ಚಿಸಿ ಉತ್ತರ ಕೊಡುತ್ತೇನೆ ಎಂದಿದ್ದಾರೆ. ಇನ್ನು ಐಟಿ ಅಧಿಕಾರಿಗಳು ಅವರ ಕರ್ತವ್ಯ ಅವರು ನಿರ್ವಹಿಸಿದ್ದಾರೆ.
ನಾನು ಕ್ರಿಪ್ಟೋ ಕರೆನ್ಸಿ ಹೂಡಿಕೆಯಲ್ಲಿ ರಾಜ್ಯದ ಎರಡನೇ ವ್ಯಕ್ತಿಯಾಗಿದ್ದಾನೆ. ಆದ್ದರಿಂದ ಐಟಿ ಅಧಿಕಾರಿಗಳು ಬಂದಿರ ಬಹುದು ತನಿಖೆ ಎದುರಿಸಲು ಸಿದ್ದನಿದ್ದೇನೆ ಎಂದು ರವಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಫೈಟರ್ ರವಿ ವಿರುದ್ದ ಒಂದೆಡೆ ಐಟಿ ಅಧಿಕಾರಿಗಳು ಕೆಲವು ದಾಖಲೆ ಪಡೆದು ತನಿಖೆ ನಡೆಸುತ್ತಿದ್ದರೆ ಮತ್ತೊಂದೆಡೆ ಸಿಸಿಬಿ ಸಹ ಫೈಟರ್ ಗೋಡಂಬಿ ವ್ಯವಹಾರದ ವಂಚನೆ ವಿಚಾರದಲ್ಲಿ ತನಿಖೆಗೆ ಮುಂದಾಗಿದ್ದಾರೆ.