ಇತ್ತೀಚಿನ ದಿನಗಳಲ್ಲಿ ಮಾಂಸಸೇವನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಾಮಾನ್ಯವಾಗಿ ವಾರದಲ್ಲಿ ಒಂದು ಬಾರಿ, ತಿಂಗಳಲ್ಲಿ ಎರಡು ಬಾರಿ ಮಾಂಸ ತಿನ್ನುವವರು ಇದ್ದಾರೆ. ಆದರೆ ಕೆಲವರು ಅತಿಯಾಗಿ ಮಾಂಸ ಸೇವನೆ ಮಾಡುತ್ತಾರೆ. ಮಾಂಸ ಸೇವನೆ ಮಾಡುವುದು ಅನೇಕ ಆರೋಗ್ಯ ಪ್ರಯೋಜನಗಳೊಂದಿಗೆ ಸಂಬಂಧಿಸಿದೆ. ಮಿತವಾದ ಮಾಂಸ ಸೇವನೆ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಜೀವಸತ್ವಗಳು ಮತ್ತು ಖನಿಜಗಳು ಮಾಂಸದಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತವೆ
ದುಬಾರಿ ಕ್ರೀಮ್ ಗೆ ಹೇಳಿ ಗುಡ್ ಬಾಯ್: ಮುಖದ ಕಾಂತಿ ಹೆಚ್ಚಿಸಲು ಸ್ನಾನಕ್ಕೆ ಮೊದಲು ಇಷ್ಟು ಮಾಡಿ ಸಾಕು!
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿಯನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಎಂದರೆ ಬೊಜ್ಜು ಮತ್ತು ಮಧುಮೇಹ. ಸದ್ಯ ಈ ಸಮಸ್ಯೆಗಳು ಪ್ರಪಂಚಾದ್ಯಂತ ಲಕ್ಷಾಂತರ ಮಂದಿಯನ್ನು ಕಾಡುತ್ತಿದೆ. ಇದರಿಂದ ಸಾಕಷ್ಟು ಮಂದಿ ನಾನಾ ರೋಗಗಳಿಂದ ಬಳಲುತ್ತಿದ್ದಾರೆ
ನಿರ್ದಿಷ್ಟವಾಗಿ ಹೇಳುವುದಾದರೆ, ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಉತ್ಪಾದಿಸದಿರುವುದು ಅಥವಾ ಬಳಸದಿರುವುದರಿಂದ ಮಧುಮೇಹ ಉಂಟಾಗುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದರೆ, ನಿರ್ದಿಷ್ಟವಾಗಿ ಹೇಳುವುದಾದರೆ ಆಹಾರ ಪದ್ಧತಿಯಲ್ಲಿನ ಕೆಲವು ಬದಲಾವಣೆಗಳು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಇತ್ತೀಚಿನ ಅಧ್ಯಯನಗಳು ಸಂಸ್ಕರಿಸಿದ ಮಾಂಸವನ್ನು ವಿಶೇಷವಾಗಿ ಮೇಕೆ ಮಾಂಸ ತಿನ್ನುವವರಿಗೆ ಟೈಪ್ 2 ಮಧುಮೇಹ ಬರುವ ಅಪಾಯ ಹೆಚ್ಚು ಎಂಬುವುದನ್ನು ತೋರಿಸುತ್ತದೆ. ಇಂಗ್ಲೆಂಡ್ನ ಪ್ರಮುಖ ವಿಶ್ವವಿದ್ಯಾಲಯವೊಂದು ನಡೆಸಿದ ಸಂಶೋಧನೆಯು 31 ವಿಭಿನ್ನ ಅಧ್ಯಯನಗಳಿಂದ ಸಂಗ್ರಹಿಸಲಾದ 1.97 ಮಿಲಿಯನ್ ಜನರ ಡೇಟಾವನ್ನು ವಿಶ್ಲೇಷಿಸಿದೆ.
ಈ ಸಂಶೋಧನೆಯ ಪ್ರಕಾರ, ಪ್ರತಿದಿನ 50 ಗ್ರಾಂ ಸಂಸ್ಕರಿಸಿದ ಮಾಂಸವನ್ನು ಸೇವಿಸುವವರಿಗೆ ಮಧುಮೇಹ ಬರುವ ಅಪಾಯವು 15% ಹೆಚ್ಚು ಎಂದು ಹೇಳಿದೆ. ಅಲ್ಲದೇ, ದಿನಕ್ಕೆ 100 ಗ್ರಾಂ ಮೇಕೆ ಮಾಂಸ ಸೇವಿಸುವವರಲ್ಲಿ ಮಧುಮೇಹ ಬರುವ ಅಪಾಯವು 10% ರಷ್ಟು ಹೆಚ್ಚಯ ಎಂದು ಸಂಶೋಧಕರು ತಿಳಿಸಿದ್ದಾರೆ, ಆದರೆ 100 ಗ್ರಾಂ ಕೋಳಿ ಮಾಂಸ ಸೇವಿಸುವವರಿಗೆ ಮಧುಮೇಹ ಬರುವ ಅಪಾಯವು 8% ರಷ್ಟು ಹೆಚ್ಚು ಎನ್ನಲಾಗಿದೆ.
ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಮೇಕೆ ಮಾಂಸ ಸೇವಿಸುವವರಿಗೆ ಮಧುಮೇಹ ಬರುವ ಅಪಾಯ ಶೇ. 62 ರಷ್ಟು ಹೆಚ್ಚಾಗಿರುತ್ತದೆ ಎಂದು ಹಿಂದಿನ ಅಧ್ಯಯನಗಳು ತಿಳಿಸಿವೆ. ಈ ಸಂದರ್ಭದಲ್ಲಿ ಅಮೇರಿಕನ್ ಆರೋಗ್ಯ ಸಂಸ್ಥೆಗಳು ಕೋಳಿ ಮೊಟ್ಟೆಯ ಸೇವನೆಯು 113 ಗ್ರಾಂ ಮೀರಬಾರದು ಎಂದು ಶಿಫಾರಸು ಮಾಡಿದೆ. ಅದೇ ರೀತಿ ಸಂಸ್ಕರಿಸಿದ ಮಾಂಸವನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ತಿನ್ನಲು ಸೂಚಿಸಲಾಗುತ್ತದೆ.
ಮಧುಮೇಹವನ್ನು ತಡೆಗಟ್ಟುವಲ್ಲಿ ಆಹಾರ ಪದ್ಧತಿಯನ್ನು ಬದಲಾಯಿಸುವುದು ಪ್ರಮುಖ ಪಾತ್ರ ವಹಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ಹೆಚ್ಚಿನ ಪ್ರೋಟೀನ್ ಅಗತ್ಯಗಳನ್ನು ಇತರ ಆರೋಗ್ಯಕರ ಆಹಾರಗಳೊಂದಿಗೆ ಬದಲಾಯಿಸುವುದು ಉತ್ತಮ ಆಯ್ಕೆಯಾಗಿದೆ. ಹಾಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು, ಆಹಾರ ಪದ್ಧತಿಯ ಬಗ್ಗೆ ಸ್ವಲ್ಪ ಗಮನ ಹರಿಸುವುದು ಅವಶ್ಯಕ
ಒಟ್ಟಾರೆ ಸಕ್ಕರೆ ಅಥವಾ ಸಿಹಿತಿಂಡಿಗಳ ಸೇವನೆಯನ್ನು ನಿಲ್ಲಿಸುವುದರಿಂದ ಮಾತ್ರ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಬಹುತೇಕ ಮಂದಿ ಅಂದುಕೊಂಡಿದ್ದಾರೆ. ಆದರೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ನೀವು ‘ಕಾರ್ಬೋಹೈಡ್ರೇಟ್ ಸೇವನೆ’ಯನ್ನು ನಿಲ್ಲಿಸಬೇಕು.