ಮನುಷ್ಯರಾದ ನಾವು ತೋರ್ಪಡಿಕೆಗಾಗಿ ನೀರನ್ನು ಉಳಿಸಿ ಅಂತ ವೇದಂತ ಹೇಳುತ್ತೇವೆ. ನಮಗೆ ಅರಿವಿಲ್ಲದೆಯೇ ನೀರನ್ನು ವ್ಯರ್ಥ ಮಾಡುತ್ತೇವೆ. ಆದರೆ, ಇಲ್ಲೊಂದು ಶ್ವಾನ ಮಾಡಿರುವ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಹೌದು, ರೆಡ್ಡಿಟ್ನಲ್ಲಿ ಈ ಶ್ವಾನದ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ದೃಶ್ಯದಲ್ಲಿ ಶ್ವಾನವೊಂದು( ನಾಯಿ) ಓಡಿಬಂದು ನಲ್ಲಿಯನ್ನು ಆನ್ ಮಾಡುತ್ತದೆ. ನೀರನ್ನು ಕುಡಿದ ನಂತರ ತನ್ನ ಮೂತಿಯಿಂದ ನಲ್ಲಿಯನ್ನು ಆಫ್(ಬಂದ್) ಮಾಡುತ್ತದೆ. ನೆಟ್ಟಿಗರು ಈ ವಿಡಿಯೋ ನೋಡಿ ಫಿದಾ ಆಗಿದ್ದಾರೆ.

ಈ ಶ್ವಾನ ಮನುಷ್ಯರಿಗಿಂತ ಜವಾಬ್ದಾರಿಯುತವಾಗಿ ವರ್ತಿಸುತ್ತಿದೆ. ಇದು ತುಂಬಾ ಬುದ್ಧಿವಂತ ಶ್ವಾನ ಅಂತ ಶ್ಲಾಘಿಸುತ್ತಿದ್ದಾರೆ. ಮೂಲತಃ ಈ ವಿಡಿಯೋ ಅನ್ನು ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ರೆಡ್ಡಿಟ್ನಲ್ಲಿ ಈವರೆಗೆ 3,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ತಮಗೆ ಅನ್ನಿಸಿದ್ದನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ.

