ಬೆಂಗಳೂರು: ಕನ್ನಡಕ್ಕಿಂತ ಯಾವ ಸ್ಟಾರ್ ಕೂಡ ದೊಡ್ಡವರಲ್ಲ ಎಂದು ಚಿತ್ರರಂಗದ ವಿರುದ್ಧ ಸಾ ರಾ ಗೋವಿಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಕ್ಕಿಂತ ದೊಡ್ಡವರು ಯಾರೂ ಇಲ್ಲ ಅಂತ ರಾಜ್ಕುಮಾರ್ ಹೇಳುತ್ತಿದ್ದರು. ಕನ್ನಡದ ಎದುರಿನಲ್ಲಿ ವ್ಯಕ್ತಿಗತವಾಗಿ ಯಾರನ್ನೂ ದೊಡ್ಡವರು ಎಂದು ನಾವು ಹೇಳಲ್ಲ.
ರಾಜ್ಕುಮಾರ್ ಹಾಕಿದ ಭದ್ರ ತಳಹದಿಯ ಮೇಲೆ ಎಲ್ಲ ಕಲಾವಿದರು ನಿಂತಿದ್ದಾರೆ. ನಿಮಗೂ ಜವಾಬ್ದಾರಿ ಇದೆ. ಕರ್ನಾಟಕದ ವಿರುದ್ಧ ದಬ್ಬಾಳಿಕೆ ನಡೀತಾ ಇದ್ದು, ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ಕೊಡಬೇಡಿ. ಇನ್ನೂ ಕಾಲಾವಕಾಶ ಇದೆ. ಸ್ವಾಭಿಮಾನಿ ಗಳಾಗಿದ್ದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಇಬ್ಬರು-ಮೂವರಿಗೋಸ್ಕರ ನಾಡಿನ ಹಿತಾಸಕ್ತಿಯನ್ನು ಬಲಿಕೊಡಲು ಸಾಧ್ಯವಿಲ್ಲ’ ಎಂದು ಸಾ.ರಾ. ಗೋವಿಂದು ಕಿಡಿಕಾರಿದ್ದಾರೆ.
