ಶಿಮ್ಲಾ: ಪಕ್ಷಾಂತರ ಮಾಡುವ ಶಾಸಕರಿಗೆ ಯಾವುದೇ ಪಿಂಚಣಿ ಇರುವುದಿಲ್ಲ ಎಂಬ ಹೊಸ ಮಸೂದೆಯನ್ನು ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಅಂಗೀಕರಿಸಿದೆ.
ಹಿಮಾಚಲ ಪ್ರದೇಶ ಸರ್ಕಾರ ಅಭೂತಪೂರ್ವ ಕ್ರಮವೊಂದನ್ನು ಕೈಗೊಂಡಿದ್ದು, ಪಕ್ಷಾಂತರಿಗಳಿಗೆ ಪಿಂಚಣಿ ನಿಲ್ಲಿಸುವ ಹೊಸ ಮಸೂದೆಯನ್ನು ಇಂದು ವಿಧಾನಸಭೆಯಲ್ಲಿ ಅಂಗೀಕಾರ ಮಾಡಿದೆ.
ಪಕ್ಷಾಂತರ ಮಾಡಿದ ಶಾಸಕರಿಗೆ ಪಿಂಚಣಿ ನೀಡುವುದನ್ನು ನಿಲ್ಲಿಸುವ ಮಸೂದೆಯನ್ನು ಮಂಗಳವಾರ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಅನರ್ಹಗೊಂಡಿರುವ ಶಾಸಕರಿಗೆ ಇದು ಅನ್ವಯಿಸುತ್ತದೆ.
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಹಿಮಾಚಲ ಪ್ರದೇಶ ವಿಧಾನಸಭೆ (ಸದಸ್ಯರ ಭತ್ಯೆ ಮತ್ತು ಪಿಂಚಣಿ) ತಿದ್ದುಪಡಿ ಮಸೂದೆ 2024 ಎಂಬ ಶೀರ್ಷಿಕೆಯ ಮಸೂದೆಯನ್ನು ಮಂಡಿಸಿದರು.