ಕಲಬುರ್ಗಿ:- ಬಿಜೆಪಿಯಿಂದ ನನ್ನನ್ನು ಹೊರಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಲೋಕಸಭಾ ಚುನಾವಣೆ ಮುಗಿಯಲಿ, ನಂತರ ನಾನು ತೋರಿಸುತ್ತೇನೆ. ಚುನಾವಣೆಯೊಳಗೆ ರಾಜ್ಯ ಕಾಂಗ್ರೆಸ್ ಸರ್ಕಾರ 2ಎ ಮೀಸಲಾತಿ ನೀಡಬೇಕು. ಇಲ್ಲದಿದ್ರೆ ಕಾಂಗ್ರೆಸ್ಗೆ ವೋಟ್ ಹಾಕಬೇಡಿ. ನಾನು ಮೀಸಲಾತಿ ತಂದು ತೋರಿಸ್ತೆನೆ ಕೇಂದ್ರದಲ್ಲಿ ನಮ್ಮದೆ ಸರ್ಕಾರ ಬರುತ್ತೆ ಎಂದರು.
ಇನ್ನು ಲೋಕಸಭಾ ಚುನಾವಣೆಯಲ್ಲಿ ನಿರ್ಣಯ ತೆಗೆದುಕೊಳ್ಳಲು ಈ ಸಮಾವೇಶ ಆಯೋಜಿಸಲಾಗಿದೆ. ಈ ಮೂಲಕ ದೀಕ್ಷಾ, ಪಂಚಮಸಾಲಿ ಸಮಾಜಗಳು ಒಂದು ಮಾಡಲು ಮುಂದಾಗಿದ್ದೇವೆ. ನಮ್ಮ ಹೋರಾಟದಿಂದಲೇ ವೀರಶೈವ ಲಿಂಗಾಯತ ಸಮಾಜ ಒಂದಾಗುತ್ತಿದೆ. ಮೀಸಲಾತಿ ದೊರೆಯುವುದಕ್ಕೆ ಪ್ರಧಾನಿ ಮೋದಿ, ಶಾ ಮುತುವರ್ಜಿ ವಹಿಸಿದ್ದರು. ಕೆಲ ಸ್ವಾಮೀಜಿಗಳು ಯಾರೂ ಏನು ಕೆಲಸ ಮಾಡುತ್ತಿಲ್ಲ ಎಂದು ಯತ್ನಾಳ್ ಸ್ವ ಸಮುದಾಯದ ಸ್ವಾಮೀಜಿಗಳ ವಿರುದ್ದ ಕಿಡಿಕಾರಿದರು
ಕೆಲ ಸ್ವಾಮೀಜಿಗಳು, ‘ನೀನು ಸಿಎಂ ಆಗ್ತೀಯಾ ಎಂದು ಆಶೀರ್ವದಿಸ್ತಾರೆ, ನಮ್ಮ ವಿಜಯಪುರ ಮಂದಿ ಯಾವುದಕ್ಕೂ ಅಂಜುವುದಿಲ್ಲ. ವಿಧಾನಸಭೆ ಚುನಾವಣೆ ವೇಳೆ ನನಗೆ ಟಿಕೆಟ್ ತಪ್ಪಿಸ್ತೀನಿ ಎಂದು ಕೆಲವರು ಹೇಳಿದ್ದರು. ಅವರೆಲ್ಲಾ ಏನ್ ಮಾಡಿದ್ರು, ಬಿಜೆಪಿಯ ಮೊದಲ ಲಿಸ್ಟ್ನಲ್ಲೇ ನನಗೆ ಟಿಕೆಟ್ ಸಿಕ್ಕಿತು. ಪರೋಕ್ಷವಾಗಿ ವಿರೋಧಿಗಳ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ಗುಡುಗಿದರು.