ಹಾಸನ: ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಿ ಮೇಕೆ ಕರೆದುಕೊಂಡು ಬರುತ್ತಾರೋ ಇಲ್ಲಾ ನೀರು ತರುತ್ತಾರೋ ಗೊತ್ತಿಲ್ಲ ಅಂತ ಜೆಡಿಎಸ್ ನಾಯಕ ಹೆಚ್.ಡಿ ರೇವಣ್ಣ ಲೇವಡಿ ಮಾಡಿದ್ದಾರೆ. ಹಾಸನದಲ್ಲಿ ಮಾತನಾಡಿರುವ ರೇವಣ್ಣ, ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ರಾಜ್ಯದ ಜನತೆ ಬಳಿ ಮತ ಕೇಳುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮಗೇನು ಪ್ರಯೋಜನ ಆಗಲ್ಲ ಅಂತಾ ಕೃಷ್ಣ ನದಿ ಯೋಜನೆ ಕೈಬಿಟ್ಟರು ಈಗ ಮೇಕೆದಾಟು ಅಂತಾ ಓಡಾಡುತ್ತಿದ್ದಾರೆ. ಮೇಕೆ ಕರೆದುಕೊಂಡು ಬರುತ್ತಾರೋ ಇಲ್ಲಾ ನೀರು ತರುತ್ತಾರೋ ಗೊತ್ತಿಲ್ಲ. ಇದು ಚುನಾವಣೆ ಗಿಮಿಕ್ ಅಷ್ಟೇ, ರಾಜಕಾರಣದಲ್ಲಿ ಹೆಚ್ಚು ದಿನ ಗಿಮಿಕ್ ನಡೆಯೋಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
