ಕಲಬುರಗಿ: ತೀವ್ರ ಚರ್ಚೆಗೆ ಗ್ರಾಸವಾಗಿರುವ ಜಾತಿ ಸಮೀಕ್ಷೆಯ ಕಾಂತರಾಜು ವರದಿ ಬೇಡವೇ ಬೇಡ ಅಂತ ಕಲಬುರಗಿಯ ವೀರಶೈವ ಮಹಾಸಭಾದ ಯುವ ಘಟಕ ಇಂದು ರಕ್ತದಲ್ಲಿ ಸಹಿ ಸಂಗ್ರಹ ಮಾಡಿತು..
ಯುವ ಮುಖಂಡ ಎಂಎಸ್ ಪಾಟೀಲ್ ಸೇರಿದಂತೆ ಹಲವಾರು ಯುವಕರು ನಗರದ ಆನಂದ್ ವೃತ್ತದ ಬಳಿ ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಅಷ್ಟೇಅಲ್ಲ ಸರ್ಕಾರ ಈ ವರದಿಯನ್ನ ನಾವು ಒಪ್ಪುವುದಿಲ್ಲ ಹೀಗಾಗಿ ಕಾಂತರಾಜು ವರದಿ ಪ್ರಕಟಿಸಬಾರದು ಅಂತ ಹೇಳಿದ್ರು..