ಇಂದು ಬೆಂಗಳೂರಿನಲ್ಲಿ ಸಚಿವ ಮುರುಗೇಶ್ ನಿರಾಣಿ ರವರಿಗೆ ಮಾಜಿ ಕೇಂದ್ರ ಸಚಿವ ಸದಾನಂದ ಗೌಡರು ಧನ್ಯವಾದ ತಿಳಿಸಿದ್ದಾರೆ. ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ-ಆಪರೇಟಿವ್ ಲಿಮಿಟೆಡ್ನ ನ್ಯಾನೋ ಫರ್ಟಿಲೈಸರ್ ಕಾರ್ಖಾನೆಗೆ ಕೆಐಎಡಿಬಿ ವತಿಯಿಂದ ಜಾಗ ನೀಡಿರುವುದಕ್ಕೆ ನಿರಾಣಿ ಯವರಿಗೆ ಧನ್ಯವಾದ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಯು. ಎಸ್. ಅವಸ್ಥಿ, ಇಫ್ಕೋ-ಟೋಕಿಯೋ ಜನರಲ್ ಇನ್ಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಅಧ್ಯಕ್ಷರು, ಇಫ್ಕೋ ನಿರ್ದೇಶಕರು ಮತ್ತು ಕೋಲಾರ ವಿಧಾನಸಭಾ ಶಾಸಕರಾದ ಕೆ. ಶ್ರೀನಿವಾಸ ಗೌಡ , ರಾಜ್ಯ ಮಾರಾಟ ವ್ಯವಸ್ಥಾಪಕರಾದ ಡಾ.ಸಿ.ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

