ಬೆಂಗಳೂರು: ರೂಪಾಂತರಿ ಓಮಿಕ್ರಾನ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ. ಅದರಂತೆ ನಗರದ ಕೆ ಆರ್ ಪುರದಲ್ಲಿ ಪೊಲೀಸರು ನೈಟ್ ಕರ್ಫ್ಯೂ ಯಶಸ್ವಿಗೊಳಿಸಿದ್ದಾರೆ. ರಾತ್ರಿ 10 ಗಂಟೆಯ ನಂತರ ತೆರೆದಿದ್ದ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದ್ದು, ಮೆಡಿಕಲ್, ಸರಕು ಸಾಗಾಣಿಕೆ ಸೇರಿದಂತೆ ಅಗತ್ಯ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳಿಗೆ ನಿರ್ಬಂಧ ವಿಧಿಸಿದರು. ಹಾಗೂ ಕಟ್ಟುನಿಟ್ಟಾಗಿ ಮೊದಲ ದಿನದ ನೈಟ್ ಕರ್ಫ್ಯೂವನ್ನು ಕೆ ಆರ್ ಪುರದ ಪೊಲೀಸರು ಯಶಸ್ವಿ ಗೊಳಿಸಿದ್ದಾರೆ ಎಂದು ಹೇಳಲಾಗಿದೆ.
