ಎಂ.ಜಿ ರಸ್ತೆಯಲ್ಲಿ ಪಾರ್ಟಿ ಮಾಡುತ್ತಿದ್ದ ನಟಿ ದಿವ್ಯಾ ಸುರೇಶ್ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದೆ ಎಂದ ಸುದ್ದಿ ಆಗಿತ್ತು. ನೈಟ್ ಕರ್ಫ್ಯೂ ಇದ್ದರೂ ನಟಿ ರಂಪಾಟ ಕಂಡು ಎಲ್ಲರೂ ಶಾಕ್ ಆಗಿದ್ದರು. ಇನ್ನೂ ಕೆಲವರು ಆಕೆ ಚೆನ್ನಾಗಿ ಕುಡಿದು ಗಲಾಟೆ ಮಾಡಿದ್ದಾಳೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಅಂದು ನಡೆದಿದ್ದು ಏನು? ನಿಜಕ್ಕೂ ಕಾವ್ಯ ಸುರೇಶ್ ಕುಡಿದು ಗಲಾಟೆ ಮಾಡಿದರಾ? ಈ ಬಗ್ಗೆ ಅವರೇ ಹೇಳಿದ್ದಾರೆ. ತನ್ನ ಬಳಿ ಏನು ಸಾಕ್ಷಿ ಇದೆ ಎಂದು ಎಂದು ದಿವ್ಯಾ ಸುರೇಶ್ ಮಾತನಾಡಿದ್ದಾರೆ.
‘9 ಗಂಟೆಗೆ ನಾವಿದ್ದ ಹೋಟೆಲ್ ಕ್ಲೋಸ್ ಆಗುತ್ತೆ ನಾನು 9.10ಕ್ಕೆ ಕೆಳಗೆ ಬರ್ತೀವಿ. ಆಗ ನಾನು ಕ್ಯಾಬ್ ಕೂಡ ಬುಕ್ ಮಾಡ್ತೀವಿ. ಅದನ್ನು ನಾನು ಪೊಲೀಸರಿಗೆ ತೋರಿಸಿದ್ದೆವು ಕೂಡ. ಪೊಲೀಸರು ಸರಿ ನೀವು ಬುಕ್ ಮಾಡಿ ಹೊರಡಿ ಅಂತ ಹೇಳಿದ್ರು. ಅಲ್ಲಿದ್ದ ಕ್ಯಾಮೆರಾಗಳು ನನ್ನ ನೋಡಿದ ತಕ್ಷಣ ನನ್ನ ಮೇಲೆ ಅಟ್ಯಾಕ್ ಮಾಡುತ್ತಾರೆ. ಕಲಾವಿದೆ ಆಗಿ ನನಗೂ ಭಯ ಇದ್ದೇ ಇರುತ್ತೆ ಎಂದು ಗರಂ ಆಗಿದ್ದಾರೆ. ‘ಪಬ್ಲಿಕ್‌ನಲ್ಲಿ ಯಾರಾದ್ರೂ ವಿಡಿಯೋ ಮಾಡಿದ್ರೆ ಏನು ಆಗಬಹುದು. ನಾನು ಹೊರಡಬೇಕಿತ್ತು. ಅವರ ಜೊತೆ ಅಲ್ಲೇ ವಾದ ಮಾಡಿಕೊಂಡು ನಿಂತಿದ್ದರೆ ರಾತ್ರಿ 10 ಗಂಟೆ ಆದರೂ ಮನೆಗೆ ಹೋಗಲು ಆಗುತ್ತಿರಲಿಲ್ಲ’ ಎಂದು ದಿವ್ಯಾ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ನಾವು ಕೆಳಗೆ ಬಂದಾಗ ರಾತ್ರಿ 9.10 ಆಗಿತ್ತು.ಕ್ಯಾಬ್ ಬುಕ್ ಮಾಡಿರುವ ಸಾಕ್ಷಿ ಇದೆ. ಹೋಟೆಲ್‌ನಲ್ಲಿ ಬಿಲ್ ಕಟ್ಟಿರುವುದಕ್ಕೆ ಮೊಬೈನ್‌ನಲ್ಲಿ ಸಾಕ್ಷಿ ಇದೆ. ಒಂದೇ ಪ್ರಶ್ನೆ ಕೇಳಿದ್ದು ಅದನ್ನು ಯಾಕೆ ಇವ್ರು ತಪ್ಪಾಗಿ ತೋರಿಸುತ್ತಿದ್ದಾರೆ? ನಿಜ ಇದರ ಬಗ್ಗೆ ನನಗೆ ಮಾತನಾಡುವುದಕ್ಕೆ ಇಷ್ಟವಿಲ್ಲ. ನನ್ನ ಸ್ನೇಹಿತ ಮಾತನಾಡುತ್ತಿದ್ದ, ಜವಾಬ್ದಾರಿಯಿಂದ ಮಾತನಾಡಿ ಮೊಬೈಲ್‌ನಲ್ಲಿ ಯಾಕೆ ವಿಡಿಯೋ ಮಾಡ್ತಿದ್ದೀರಾ ಅಂತ ಪ್ರಶ್ನೆ ಮಾಡಿದಕ್ಕೆ ಅವರ ಮೇಲೂ ಹೋಗುತ್ತಿದ್ದಾರೆ’ ಎಂದು ದಿವ್ಯಾ ಹೇಳಿದ್ದಾರೆ.
‘ಎಲ್ಲಾ ಕಡೆ ರಾಸ್ತ ಪಬ್ ಅಂತ ತೋರಿಸುತ್ತಿದ್ದಾರೆ ದಯವಿಟ್ಟು ಗೂಗಲ್ ಮಾಡಿ ನೋಡಿ ಅದು ರಾಸ್ತ ಪಬ್ ಅಥವಾ ರಾಸ್ತ ಕೆಫೆ ನಾ ಎಂದು. ಇದನ್ನು ಮೀರಿ ನಾನು ಉತ್ತರ ಕೊಡುವುದಕ್ಕೆ ಆಗೋಲ್ಲ. ಪಬ್‌ಗೆ ಹೋಗಿ ಕುಡಿದಿದ್ದು ಕುಡಿದ ಮತ್ತಲ್ಲಿ ಏನ್ ಏನ್ ನೀವು ಬಂದು ನೋಡಿದ್ರಾ ನಾನು ಕುಡಿದಿದ್ದೆ ಅಂತಾ? ನಾನು ಕುಡಿದಿದ್ದೆ ಅಂತ ನಿಮ್ಮ ಹತ್ರ ಸಾಕ್ಷಿ ಇದ್ಯಾ? ಆಯ್ತು ಸಾಕ್ಷಿ ಬಗ್ಗೆ ಬಿಡಿ ನಾನು ಏನಾದರೂ ಅಸಭ್ಯವಾಗಿ ವರ್ತಿಸಿದ್ನಾ? ವೈಯಕ್ತಿಕವಾಗಿ ಈ ವಿಚಾರ ಮಾತನಾಡುವುದಕ್ಕೆ ನನಗೇ ಇಷ್ಟ ಇರಲಿಲ್ಲ ಆದರೂ ಈ ವಿಚಾರದ ಬಗ್ಗೆ ನಾನು ಕ್ಲಾರಿಟಿ ಕೊಡಬೇಕು ಅನಿಸಿತು’ ಎಂದಿದ್ದಾರೆ.