ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಹೊಸವರ್ಷಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿರೋದ್ರಿಂದ ಸರ್ಕಾರ ಆಚರಣೆಗೆ ಕಠಿಣ ರೂಲ್ಸ್ ತಂದಿದ್ದು,ಜೊತೆಗೆ ಮಾರ್ಗಸೂಚಿ ಕೂಡ ಜಾರಿ ಮಾಡಿದೆ. ಈ ಕುರಿತು ಸಿಎಂ ಹಾಗೂ ಗೃಹ ಸಚಿವರೊಂದಿಗೆ ಇದೇ ವಾರ ಪೊಲೀಸ್ ಇಲಾಖೆ ಸಭೆ ನಡೆಸಲಿದ್ದು,
ಸಭೆಯಲ್ಲಿ, ಎಲ್ಲಾ ನಿಯಮಗಳ ಜೊತೆ ವರ್ಷದ ಕೊನೆ ದಿನದಂದು ಪಬ್, ರೆಸ್ಟೋರೆಂಟ್ ಗಳನ್ನ ರಾತ್ರಿ ಹನ್ನೊಂದು ಗಂಟೆಗೆ ಮುಚ್ಚಿಸುವ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈಗಾಗ್ಲೇ ಪೊಲೀಸರು ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಭದ್ರತೆ ಹಾಗೂ ವೈರಸ್ ತಡೆಗಟ್ಟುವ ದೃಷ್ಟಿಯಿಂದ ಪಬ್ ಹಾಗೂ ರೆಸ್ಟೋರೆಂಟ್ ಗಳನ್ನ ಬೇಗ ಕ್ಲೋಸ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.
