ಬೆಂಗಳೂರು: ಮೋದಿ ಸರ್ಕಾರವು ಅನ್ನದಾತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಯೋಜನೆಯನ್ನು ಬಹಳ ಮಹತ್ವಾಕಾಂಕ್ಷೆಯಿಂದ ಜಾರಿಗೊಳಿಸಿದೆ. ಈ ಯೋಜನೆಯಿಂದ ಕೋಟ್ಯಂತರ ರೈತರು ನೇರ ಲಾಭ ಪಡೆಯುತ್ತಿದ್ದಾರೆ. ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಪಿಎಂ ಕಿಸಾನ್ ಯೋಜನೆಯಡಿ, ಕೇಂದ್ರವು ದಾನಿಗಳ ಬ್ಯಾಂಕ್ ಖಾತೆಗಳಿಗೆ ಇದುವರೆಗೆ 18 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ.
ಪಿಎಂ ಕಿಸಾನ್ ಸನ್ಮಾನ್ಯ ಯೋಜನೆಯ 18ನೇ ಕಂತಿನ ಹಣವನ್ನು ಇದೇ ಅಕ್ಟೋಬರ್ 5 ನೇ ತಾರೀಖಿನಂದು ಪ್ರತಿಯೊಬ್ಬರ ರೈತರ ಖಾತೆಗೆ ಜಮಾ ಮಾಡಲಾಗಿತ್ತು ಮತ್ತು ಸಾಕಷ್ಟು ರೈತರು ಈಗ ಪಿಎಂ ಕಿಸಾನ್ ಯೋಜನೆಗೆ 19ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾತುರದಿಂದ ಎದುರು ನೋಡುತ್ತಿದ್ದರು. ಇದೀಗ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣವನ್ನು ಫೆಬ್ರುವರಿ 2025 ರಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಹೊರ ಬಂದಿದೆ.
ಕೇಂದ್ರ ಸರ್ಕಾರ 19ನೇ ಕಂತಿನ ಹಣ ಬಿಡುಗಡೆಗೆ ಮುನ್ನ ರೈತರು ಮಾಡಬೇಕಾದ ಕೆಲಸಗಳಿವು
- ನೀವು ಇ–ಕೆವೈಸಿ ಮಾಡಿಸದಿದ್ದರೆ ಕೂಡಲೇ ಆ ಕೆಲಸ ಮಾಡಿ.
- ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡಿ
- ನಿಮ್ಮ ಕೃಷಿ ಭೂಮಿಯ ದಾಖಲೆಯನ್ನು ಕೃಷಿ ವಿಭಾಗದಿಂದ ವೆರಿಫಿಕೇಶನ್ ಮಾಡಿಸಿಕೊಳ್ಳಿ
- ಪಿಎಂ ಕಿಸಾನ್ ಪೋರ್ಟಲ್ನಲ್ಲಿ ಈ ಯೋಜನೆಯ ಬೆನಿಫಿಷಿಯರಿ ಲಿಸ್ಟ್ನಲ್ಲಿ ನಿಮ್ಮ ಹೆಸರು ಇದೆಯಾ ಎಂಬುದನ್ನೂ ದೃಢಪಡಿಸಿಕೊಳ್ಳಿ.
- ಬೆನಿಫಿಶಿಯರಿ ಲಿಸ್ಟ್ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಮತ್ತೊಮ್ಮೆ ಈ ಯೋಜನೆಗೆ ಹೆಸರು ನೊಂದಾಯಿಸಬೇಕಾಗುತ್ತದೆ.
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇದೆಯಾ ಎಂದು ನೋಡುವುದು ಹೇಗೆ?
- ಪಿಎಂ ಕಿಸಾನ್ ಪೋರ್ಟಲ್ಗೆ (https://pmkisan.gov.in/) ಭೇಟಿ ನೀಡಿ
- ಅಲ್ಲಿ ಬೆನಿಫಿಷಿಯರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಅಥವಾ ನೊಂದಣಿ ಸಂಖ್ಯೆಯಲ್ಲಿ ಬಾಕ್ಸ್ನಲ್ಲಿ ತುಂಬಿರಿ
- ಕ್ಯಾಪ್ಚಾ ಕೋಡ್ ಹಾಕಿ, ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿ
ಹೀಗೆ ಮಾಡಿದ ಬಳಿಕ ಈ ಯೋಜನೆಯಲ್ಲಿನ ನಿಮ್ಮ ಎಲ್ಲಾ ವಿವರ ತೆರೆದುಕೊಳ್ಳುತ್ತದೆ. ನಿಮಗೆ ತಲುಪಿದ ಹಿಂದಿನ ಕಂತುಗಳ ಹಣ, ಇ–ಕೆವೈಸಿ ವಿವರ, ಅಕೌಂಟ್ ಸ್ಟೇಟಸ್ ಇತ್ಯಾದಿ ಮಾಹಿತಿ ಇರುತ್ತದೆ. ಯಾವುದಾದರೂ ದಾಖಲೆಯ ಅಗತ್ಯತೆ ಇದ್ದರೆ ಅದೂ ಕೂಡ ನಮೂದಾಗುತ್ತದೆ.
ಪಿಎಂ ಕಿಸಾನ್ ಯೋಜನೆಯ ಹಣ ಯಾವ್ಯಾವಾಗ ಬಿಡುಗಡೆ ಆಗುತ್ತದೆ?
2018-19ರಲ್ಲಿ ಅರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಈವರೆಗೂ 18 ಕಂತುಗಳು ಬಿಡುಗಡೆ ಆಗಿವೆ. ಮೊದಲ ಕಂತು 2018 ಡಿಸೆಂಬರ್ನಲ್ಲಿ ಬಿಡುಗಡೆ ಆಗಿತ್ತು. ಆ 3.16 ಕೋಟಿ ರೈತರ ಖಾತೆಗೆ ಹಣ ವರ್ಗಾವಣೆ ಆಗಿತ್ತು.