ಬೆಂಗಳೂರು: ನಾನ್-ವೆಜ್ ಪ್ರೇಮಿಗಳಲ್ಲಿ ಚಿಕನ್ ಬಹುಶಃ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಸ್ಟಾರ್ಟರ್ ಗಳು ಮತ್ತು ಅಪೆಟಿಸರ್ ಗಳಿಂದ ಹಿಡಿದು ಮುಖ್ಯ ಕೋರ್ಸ್ ವರೆಗೆ ಚಿಕನ್ ನೊಂದಿಗೆ ಪ್ರಯತ್ನಿಸಬಹುದಾದ ಪಾಕವಿಧಾನಗಳು ಬಹಳಷ್ಟಿವೆ. ಚಿಕನ್ ಸಾಮಾನ್ಯವಾಗಿ ಆರೋಗ್ಯಕರ ಆಹಾರವಾಗಿದ್ದು ಇದು ಪ್ರೋಟೀನ್ ಶಕ್ತಿಯಿಂದ ತುಂಬಿದೆ. ದೇಹಕ್ಕೆ ಹಲವಾರು ಪೋಷಕಾಂಶಗಳನ್ನು ನೀಡುತ್ತದೆ. ಆದರೆ ಈ ಭಾಗ ಮಾತ್ರ ಮುಟ್ಟಲೇ ಬಾರದು.
ಚಿಕನ್ ಸ್ಕಿನ್ ತಿನ್ನುವುದು ಒಳ್ಳೆಯದಲ್ಲ ಏಕೆಂದರೆ ಅದರಲ್ಲಿ ಹೆಚ್ಚು ಕೊಬ್ಬು ಇರುತ್ತದೆ ಹಾಗೂ ಫ್ರೆಶ್ ಆಗಿರಲು ಕೆಮಿಕಲ್ ಇಂಜೆಕ್ಷನ್ ನೀಡುತ್ತಾರೆ. ಕೋಳಿ ಚರ್ಮದಿಂದ ದೂರ ಇರಬೇಕು ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.
ಬಾಯಿಲರ್ ಕೋಳಿಯ ತೊಡೆ ಭಾಗಕ್ಕೆ ಇಂಜೆಕ್ಷನ್ ನೀಡಲಾಗುತ್ತದೆ. ತೂಕ ಹೆಚ್ಚಾಗಬೇಕು ಜನರು ಬೇಗ ಖರೀದಿ ಮಾಡುತ್ತಾರೆ ಎಂದು. ಪ್ರತಿಷ್ಠಿತ ಹೋಟೆಲ್ಗಳಲ್ಲಿ ಜನರು ಹೆಚ್ಚಾಗಿ ಕೇಳುವುದೇ ಥೈ ಪೀಸ್ ಅಥವಾ ಲೆಗ್ ಪೀಸ್.
ಇನ್ನು ನೀವು ಧೈರ್ಯವಾಗಿ ನಾಟಿ ಕೋಳಿ ತಿನ್ನಬಹುದು ಏಕೆಂದರೆ ಯಾವುದೇ ಕೆಮಿಕಲ್ಸ್ ಅಥವಾ ಇಂಜೆಕ್ಷನ್ ಬಳಸುವುದಿಲ್ಲ. ಅಲ್ಲದೆ ನಾಟಿ ಕೋಳಿ ಹೆಚ್ಚಿಗೆ ದಪ್ಪ ಆದರೆ ಜನರು ಖರೀದಿಸುವುದಿಲ್ಲ.
ಒಮೆಗಾ 3 ಮತ್ತು ಒಮೆಗಾ 6 ಕೊರತೆ ಇರುವವರು ವಾರಕ್ಕೊಮ್ಮೆ ಚಿಕನ್ ಸ್ಕಿನ್ ತಿನ್ನಬಹುದು. ದಿನ ನಿತ್ಯ ಕೋಳಿ ಸೇವಿಸುವವರು ಚಿಕನ್ ಬ್ರೆಸ್ಟ್ ತಿನ್ನಬೇಕು.
ದಿನ ಕೋಳಿ ತಿನ್ನುವವರಿಗೆ ಇದರ ಬಗ್ಗ ಹೆಚ್ಚಿಗೆ ತಿಳಿದುಕೊಂಡಿರುತ್ತಾರೆ ಆದರೆ ಅಪರೂಪಕ್ಕೆ ಅಥವಾ ವಾರಕ್ಕೆ ಒಮ್ಮೆ ತಿನ್ನುವವರು ರುಚಿಗಾಗಿ ಯಾವುದು ಸಿಕ್ಕರೂ ತಿನ್ನಲು ರೆಡಿಯಾಗಿರುತ್ತಾರೆ.