ಸೀತಾ ರಾಮಂ ಸಿನಿಮಾದ ಬಳಿಕ ನಟಿ ಮೃಣಾಲ್ ಠಾಕೂರ್ ಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೃಣಾಲ್ ಈ ಮಧ್ಯೆ ಆಗಾಗ ಫೋಟೋ ಶೂಟ್ ಗಳನ್ನು ಮಾಡಿಸುತ್ತಿದ್ದಾರೆ.

ಸೀತಾ ರಾಮಂ ಸಿನಿಮಾದಲ್ಲಿ ಸೀರೆಯುಟ್ಟ ಅಭಿಮಾನಿಗಳ ಮನ ಗೆದಿದ್ದ ನಟಿ ಹೊಸ ಹೊಸ ಫೋಟೋ ಶೂಟ್ ನಲ್ಲಿ ಡಿಫರೆಂಟ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಮೃಣಾಲ್ ಠಾಕೂರ್ ಹಂಚಿಕೊಂಡಿರುವ ಫೋಟೋ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಸಿನಿಮಾಗಳ ಮಧ್ಯೆಯೇ ಬಿಡುವು ಪಡೆದುಕೊಂಡು ಮೃಣಾಲ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ನಟಿ ಮೃಣಾಲ್ ಠಾಕೂರ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಬೋಲ್ಡ್ ಫೋಟೋಗಳನ್ನು ಫ್ಯಾನ್ಸ್ಗೋಸ್ಕರ ಶೇರ್ ಮಾಡಿಕೊಳ್ಳುತ್ತಾರೆ. ಈ ಭಾರಿ ನಟಿ ಸ್ಟೈಲಿಶ್ ಬಟ್ಟೆ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದು ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೀತಾ ರಾಮಂ ಸಿನಿಮಾ ಮೂಲಕ ಫೇಮಸ್ ಆದ ನಟಿ ಮೃಣಾಲ್ ಠಾಕೂರ್ಗೆ ಅಪಾರ ಅಭಿಮಾನಿ ಬಳಗವಿದೆ.
ಮೃಣಾಲ್ ಠಾಕೂರ್ ಹೈದರಾಬಾದ್ನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗ್ತಿದೆ. ಟಾಲಿವುಡ್ನಲ್ಲಿ ಸಾಲು ಸಾಲು ಸಿನಿಮಾ ಆಫರ್ ಬರುತ್ತಿರುವ ಹಿನ್ನೆಲೆ ನಟಿ ಹೈದಾರಾಬಾದ್ಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗ್ತಿದೆ.
ಕಿರುತೆರೆಯಲ್ಲಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೃಣಾಲ್ ಠಾಕೂರ್ ಅವರು ಮರಾಠಿ ಚಿತ್ರ ‘ವಿಟ್ಟಿ ದಂಡು’ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಆ ನಂತರ ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.
