ನೆಲಮಂಗಲ: ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿ..

ನೆಲಮಂಗಲ:ನೆಲಮಂಗಲ ತಾಲೂಕಿನ ಕುರುವೆಲ್ ಗ್ರಾಮದ ಬಳಿ ಟಾಟಾ ಏಸ್ ಪಲ್ಟಿ ಹೊಡೆದಿದೆ. ನಿನ್ನೇ ರಾತ್ರಿ ಘಟನೆ ಸಂಭವಿಸಿದೆ. Breaking: KSRTC ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ..! ಘಟನೆಯಿಂದ 3 ಜನರಿಗೆ ಗಂಭೀರ ಗಾಯವಾಗಿದ್ದು, 4 ಜನರಿಗೆ ಸಣ್ಣಪುಟ್ಟ ಗಾಯವಾಗಿದೆ. ಡಾಬಸ್ ಪೇಟೆ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಹಾರ ಮೂಲದ ಕಟ್ಟಡ ಕಾರ್ಮಿಕರು ತುಮಕೂರಿಗೆ ಮದುವೆಗೆ ಹೊರಟಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.