ಕಲಬುರಗಿ: ಬಿಸಿಯೂಟದ ವೇಳೆ ಸಾಂಬಾರ್ ತುಂಬಿದ್ದ ಬಾಣಲೆಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿಯಲ್ಲಿ ನಡೆದಿದೆ..ಚಿಣಮಗೇರಾ ಸರ್ಕಾರಿ ಶಾಲೆಯಲ್ಲಿ ನವೆಂಬರ 16 ರಂದು ಘಟನೆ ನಡೆದಿದ್ದು ಎರಡನೇ ತರಗತಿ ವಿದ್ಯಾರ್ಥಿನಿ ಮಹಂತಮ್ಮ ತೀವ್ರವಾಗಿ ಗಾಯಗೊಂಡಿದ್ಲು.
ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತ್ರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಕಳೆದ ರಾತ್ರಿ ಬಾಲಕಿ ಸಾವನ್ನಪ್ಪಿದ್ದಾಳೆ. ಕರ್ತವ್ಯ ನಿರ್ಲಕ್ಷ ಆರೋಪದ ಮೇಲೆ ಮುಖ್ಯ ಶಿಕ್ಷಕಿ ಸೇರಿ ಇಬ್ಬರನ್ನ ಜಿಲ್ಲಾಡಳಿತ ಈಗಾಗಲೇ ಸಸ್ಪೆಂಡ್ ಮಾಡಿದೆ..