Supreme Court: ನೀಟ್ ಅಕ್ರಮ ಆರೋಪ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರೀಂ ನೋಟಿಸ್‌

ನವದೆಹಲಿ: ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ‘ನೀಟ್‌-ಯುಜಿ 2004’ರ ಫಲಿತಾಂಶಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಗೆ ನೋಟಿಸ್ ಜಾರಿ ಮಾಡಿದೆ. “ಇದು ಅಷ್ಟು ಸುಲಭವಲ್ಲ… ನೀವು ಈಗಾಗಲೇ ಪರೀಕ್ಷೆಯನ್ನು ನಡೆಸಿದ್ದೀರಿ. ಪರೀಕ್ಷೆಗಳು ಪವಿತ್ರವಾಗಿವೆ,” ಎಂದು ಎನ್‌ಟಿಎಗೆ ಹೇಳಿರುವ ನ್ಯಾಯಾಲಯ, “ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದೆ… ಆದ್ದರಿಂದ ನಮಗೆ ಉತ್ತರಗಳು ಬೇಕು,” ಎಂದು ಹೇಳಿದೆ. ದಾಖಲಾತಿಗಾಗಿ ಕೌನ್ಸೆಲಿಂಗ್ ಮುಂದುವರಿಯಲಿದೆ … Continue reading Supreme Court: ನೀಟ್ ಅಕ್ರಮ ಆರೋಪ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರೀಂ ನೋಟಿಸ್‌