ಬಾಡಿ ಬಿಲ್ಡಿಂಗ್ ಸ್ಪರ್ಧೆಗಳು ಅಂತ ಬಂದರೆ ದೈತ್ಯದೇಹಿಗಳನ್ನು ನೋಡುವುದೇ ಒಂದು ಸಂಭ್ರಮ, ವರ್ಷಾನುಗಟ್ಟಲೆ ಕಸರತ್ತು ಮಾಡಿ ದೇಹವನ್ನು ವಜ್ರದೇಹಿಗಳಂತೆ ಮಾಡಿಕೊಂಡವರ ಶ್ರಮವನ್ನು ಅನಾವರಣ ಗೊಳಿಸುವ ವೇದಿಕೆ . ಇಂತಹ ಒಂದು ವೇದಿಕೆ ರಥೋತ್ಸವ ಸಮಯದಲ್ಲಿ ನಡೆದರೆ ಹೇಗಿರುತ್ತೆ ಹಬ್ಬದೂಟ ಅಲ್ವಾ.? ಹೌದು,
ವೈಟ್ಫೀಲ್ಡ್ ಸಮೀಪದ ರಾಮಗೊಂಡನಹಳ್ಳಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ದ್ರೌಪದಿ ದೇವಿಯ ಕರಗ ಮಹೋತ್ಸವದ ಅಂಗವಾಗಿ ರಾಷ್ಟ್ರಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯನ್ನು ಆಯೋಜಿಸಿದ್ದರು ರಥೋತ್ಸವದ ಸಂಭ್ರಮ ಒಂದೆಡೆಯಾದರೆ ಬಾಡಿ ಬಿಲ್ಡಿಂಗ್ನ ವೈಭವ ರಥೋತ್ಸವಕ್ಕೆ ಮತ್ತಷ್ಟು ಜೀವ ತುಂಬಿತ್ತು .
ಈ 5 ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ 1.5 ಲಕ್ಷ ರೂಪಾಯಿಗಳ ತೆರಿಗೆ ಉಳಿಸಬಹುದು!
ರಾಮಗೊಂಡನಹಳ್ಳಿಯ ಎಂ.ಶ್ರೀನಿವಾಸ್ ರವರ ನೇತೃತ್ವದಲ್ಲಿ ರಾಕ್ಸ್ ಜಿಮ್ ಹಾಗೂ ಉತ್ತಮ ಕರ್ನಾಟಕ ದೇಹದಾಡ್ಯ ಮತ್ತು ಫಿಟ್ನೆಸ್ ಅಸೋಸಿಯೇಷನ್ ಸಹಕಾರದಲ್ಲಿ ನಡೆದ 17 ನೇ ವರ್ಷ ರಾಷ್ಟ್ರ ಮಟ್ಟದ ಹಾಗೂ ಮಿಸ್ಟರ್ ಮಹದೇವಪುರ ದೇಹದಾಡ್ಯ ಸ್ಪರ್ಧೆ .
ದೇಶದ ವಿವಿಧ ರಾಜ್ಯಗಳಿಂದ 300ಕ್ಕೂ ಹೆಚ್ಚು ಸ್ಪರ್ಧಾಳುಗಳನ್ನು ಕರೆತಂದಿತು . ಹಲವು ಗಂಟೆಗಳ ಪರಿಶ್ರಮದ ಬಳಿಕ ಅದರಲ್ಲಿ ಮಿಸ್ಟರ್ ಮಹದೇವಪುರ ಪ್ರಶಸ್ತಿಯನ್ನು ರಾಜ ಶೇಖರ್ ಪಡೆದರೆ, ಮಿಸ್ಟರ್ ರಾಕ್ಸ್ ಕ್ಲಾಸಿಕ್ ಧನಂಜಯ ಗೆದ್ದುಕೊಂಡರು. ಗೆದ್ದಂತ ಸ್ಪರ್ಧಿಗಳಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಪ್ರಶಸ್ತಿಗಳನ್ನು ಪ್ರಧಾನ ಮಾಡಿ ಅವರ ಭವಿಷ್ಯಕ್ಕೆ ಒಳಿತಾಗಲಿ ಎಂದು ಆಶಿಸಿದ್ರು.