ಮಂಡ್ಯ: ಬಿಜೆಪಿಯಿಂದ ಮಾಜಿ ಸಚಿವ ನಾರಾಯಣಗೌಡ ಅಂತರ ಕಾಯ್ದುಕೊಳ್ಳುತ್ತಿರುವ ವಿಚಾರವಾಗಿ ಮಾತನಾಡಿದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ನಾರಾಯಣಗೌಡ ನಮ್ಮೊಂದಿಗೆ ಇದ್ದಾರೆ. ಚುನಾವಣೆಯಲ್ಲಿ ಸೋತ ನಂತರ ಒಂದಷ್ಟು ಸಮಯ ಬೇಕಾಗುತ್ತದೆ. ಒಳ್ಳೆಯ ಕೆಲಸ ಮಾಡಿದರೂ ಸಹ ನಾರಾಯಣಗೌಡಗೆ ಹಿನ್ನಡೆಯಾಗಿದೆ.
Vishwas Vaidya: ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ CM ಆಗುವುದು ಅಷ್ಟೇ ಸತ್ಯ: ಕಾಂಗ್ರೆಸ್ ಶಾಸಕ
ಇದಕ್ಕಾಗಿ ನಾರಾಯಣಗೌಡ ಸ್ವಲ್ಪ ನೋವಿನಲ್ಲಿ ಇದ್ದಾರೆ. ಮೊನ್ನೆಯೂ ಅವರ ಜೊತೆ ಮಾತನಾಡಿದ್ದೇನೆ. ನಾನು ರಾಜ್ಯಾಧ್ಯಕ್ಷನಾದ ವೇಳೆ ಅವರು ಬಂದು ಆಶೀರ್ವಾದ ಮಾಡಿದ್ದಾರೆ. ನಾರಾಯಣಗೌಡ ಈ ಭಾಗದಲ್ಲಿ ನಮಗೆ ಶಕ್ತಿ, ಅವರನ್ನು ಉಳಿಸಿಕೊಳ್ಳುತ್ತೇವೆ ಎಂದರು.