ಬೆಂಗಳೂರು: ಒಂದು ಕಾಲದಲ್ಲಿ ಮೆಟ್ರೋ ಅಂದ್ರೆ ಜನ ಹೋಗಿ ಹೋಗಿ ಮುಗಿಬೀಳುತ್ತಿದ್ದರು ಆದರೆ ಇತ್ತೀಚೆಗೆ ಮೆಟ್ರೋ ಅಂದ್ರೆ ಜನ ಬೇಡಪ್ಪ ಅನ್ನೋ ಸ್ಥಿತಿ ಒದಗಿ ಬಂದಿದೆ ಯಾಕಂದರೆ ಬರೀ ಅವಾಂತರಗಳೇ ಜಾಸ್ತಿ ಆದು ವಿನಾ ಅದರಿಂದ ಯಾವುದೆ ಕ್ರಮ ಕೈಗೊಳ್ಳದೆ ಸುಮ್ಮನಿರುವ ಅಧಿಕಾರಿಗಳು ಹೀಗಾಗಿ ಇದನ್ನ ಗಮನಿಸಿದ BMRCL ಈಗ ಮಹಿಳೆಯರ ಸುರಕ್ಷಿತೆಗಾಗಿ ಹೆಚ್ಚಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಹಾಗೂ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರೈಲಿನಲ್ಲಿ ಎರಡು ಕೋಚ್ಗಳನ್ನು ಮಹಿಳಾ ಪ್ರಯಾಣಿಕರಿಗೆ ಮೀಸಲಿಡಲಿದೆ. ಸದ್ಯ ನಮ್ಮ ಮೆಟ್ರೋ ರೈಲಿನಲ್ಲಿ ಒಂದು ಮಹಿಳಾ ಮೀಸಲು ಕೋಚ್ ಇದೆ. ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. , ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಶೀಘ್ರದಲ್ಲೇ ಮಹಿಳೆಯರಿಗೆ 2 ಬೋಗಿ ಮೀಸಲಿಡಲು ಚಿಂತನೆ ನಡೆಸಿದ್ದಾರೆ.
ನವೆಂಬರ್ 20 ರಂದು ಇದೇ ಮೆಜೆಸ್ಟಿಕ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ, ಕೆಂಪು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ಕೊಟ್ಟಿದ್ದರ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಡಿಸೆಂಬರ್ 7 ರಂದು ರಾಜಾಜಿನಗರಲ್ಲಿ ಮೆಟ್ರೋ ಹತ್ತಿದ್ದ ಯುವತಿಗೆ ಯುವಕನೊಬ್ಬ ಹಿಂಬದಿಯಿಂದ ಬಂದು ಆಕೆಯ ದೇಹವನ್ನ ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದ. ಈ ರೀತಿಯ ಪ್ರಕರಣ ನಡೆಯುತ್ತಿರುವುದರಿಂದ ಹೆಣ್ಣುಮಕ್ಕಳಿಗೆ ಮೆಟ್ರೋ ಎಷ್ಟು ಸುರಕ್ಷಿತ ಅನ್ನೋ ಆತಂಕಭರಿತ ಪ್ರಶ್ನೆ ಮೂಡಿತ್ತು.