ಯಳಂದೂರು : ಪಟ್ಟಣದ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಗೆ ಶಾಸಕ ಎನ್.ಮಹೇಶ್ ಭೇಟಿ ನೀಡಿದರು.ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ ತಾಲ್ಲೂಕು ಆಸ್ಪತ್ರೆಗೆ ಶಾಸಕ ಎನ್.ಮಹೇಶ್ ದಿಡೀರ್ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆ ಗಳನ್ನು ಪರಿಶೀಲಿಸಿದರು.ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದ ರಿಂದ ಆಸ್ಪತ್ರೆ ಹಾಗು ತಾಲ್ಲೂಕು ಆಡಳಿತ ಅಧಿಕಾರಿಗಳ ಜೊತೆ ತುರ್ತು ಸಭೆಯನ್ನು ನಡೆಸಿದರು,
ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಆಸ್ಪತ್ರೆಗಳು ಎಷ್ಟರ ಮಟ್ಟಿಗೆ ಸಜ್ಜಗಿದೆ ಎಂದು ಪರಿಶೀಲನೆ ಮಾಡಲಾಯಿತು, ಆಸ್ಪತ್ರೆ ಯಲ್ಲಿ ಕೋವಿಡ್ ಸಂಬಂಧ ಕೈಗೊಂಡಿರುವ ಸೂಕ್ತ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ನಂತರ ಶಾಸಕ ಎನ್.ಮಹೇಶ್ ಮಾತನಾಡಿ ಜಿಲ್ಲೆಯಲ್ಲಿ 118 ಪ್ರಕರಣಗಳು ದಾಖಲಾಗಿದೆ, ಯಳಂದೂರು ತಾಲ್ಲೂಕಿನಲ್ಲಿ ಇಲ್ಲಿಯವರೆಗೆ 23 ಪ್ರಕರಣ ಬೆಳಕಿಗೆ ಬಂದಿದೆ,

ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ 30 ಹಾಸಿಗೆಗಳು,3 ಐ.ಸಿ.ಯು ಹಾಸಿಗೆ, 4 ವೆಂಟಿಲೆಟರ್, 70 ಆಕ್ಸಿಜನ್ ಜಂಬೊ ಸಿಲೆಂಡರ್ಸ್ ಗಳು ಇದೆ ಇದನ್ನ ನಾನು ಖುದ್ದಾಗಿ ಪರಿಶೀಲನೆ ಮಾಡಿದ್ದೇನೆ ಎಂದರು, ನಾವು ಕೋವಿಡ್ 3 ನೆ ಅಲೆಯನ್ನು ಎದುರಿಸಲು ಆಸ್ಪತ್ರೆ ವೈದ್ಯರು ಹಾಗು ತಾಲ್ಲೂಕು ಆಡಳಿತ ಸಜ್ಜಾಗಿದೆ, ದಯವಿಟ್ಟು ಸರ್ಕಾರ ಮಾಡಿರುವ ಕಟ್ಟು ನಿಟ್ಟಿನ ಕ್ರಮಗಳನ್ನು ಪಾಲನೆ ಮಾಡಬೇಕು,ಎಲ್ಲರು ಸಹ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ವನ್ನು ಕಾಪಾಡಿಕೊಂಡು ಓಡಾಡಬೇಕು, ಈಗಾಗಲೇ ಯಳಂದೂರು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಓಂ ಶಕ್ತಿ ಯಾತ್ರೆಗೆ ಹೋಗಿದ್ದ ವ್ಯಕ್ತಿಗಳಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದಿದ್ದು,
ಓಂ ಶಕ್ತಿ ಯಾತ್ರೆ ಹಾಗು ಅಯ್ಯಪ್ಪ ಯಾತ್ರೆಗಳಿಗೆ ಹೋಗುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ವೈದ್ಯರಾದ ಡಾ.ಶ್ರೀಧರ್,ಡಾ.ನಾಗೇಂದ್ರ ಮೂರ್ತಿ,ರೋಟರಿ ಅಧ್ಯಕ್ಷ ಪಿ.ಮಾದೇಶ್,ಮಾಂಬಳ್ಳಿ ರಾಮಣ್ಣ,ಪ.ಪಂ. ನಾಮ ನಿರ್ದೇಶಿತ ಸದಸ್ಯ ರಘು,ಬಿಜೆಪಿ ಮಂಡಳ ಅಧ್ಯಕ್ಷ ಮಹೇಶ್,ಅನಿಲ್,ಅಂಬಳೆ ಮಹದೇವ್, ಸಿದ್ದರಾಜು, ಶಿಕ್ಷಕರಾದ ಮಹೇಶ್,ಮಂಜುನಾಥ್,ಸಿಪಿಐ ಶಿವಮಾದಯ್ಯ,ಪಿಎಸ್ಐ ಕರಿಬಸಪ್ಪ ಹಾಗು ಆಸ್ಪತ್ರೆ ಸಿಬ್ಬಂದಿಗಳು ಹಾಜರಿದ್ದರು.