ಮೈಸೂರು: ಮಹಿಷಾ ದಸರಾದಿಂದ ಮೈಸೂರು ಹೆಸರೇ ಬದಲಾಗಿದೆ. ಮಹಿಷ ದಸರಾ ಆಚರಣಾ ಸಮಿತಿ ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಬದಲಿಗೆ ಮಹಿಷೂರು, ಚಾಮುಂಡಿಬೆಟ್ಟ ಬದಲಿಗೆ ಮಹಿಷಾ ಬೆಟ್ಟ ಎಂದು ಹೆಸರು ಮುದ್ರಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಇದೇ ತಿಂಗಳು 29 ರಂದು ಮಹಿಷಾ ದಸರಾ ನಡೆಸಲು ಸಮಿತಿ ಉದ್ದೇಶಿಸಿದೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಿ ನಂತರ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮಹಿಷಾ ದಸರಾ ಹೆಸರಿನಲ್ಲಿ ಈಗಾಗಲೇ ಸಂಘರ್ಷ ಶುರುವಾಗಿದೆ.
Ghee Test: ನೀವು ಖರೀದಿಸುವ ತುಪ್ಪ ಅಸಲಿಯೋ, ನಕಲಿಯೋ..? ಹೀಗೆ ಪರೀಕ್ಷಿಸಿ ನೋಡಿ
ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದರೆ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತದೋ ಚಾಮುಂಡಿಯ ಭಕ್ತರ ಕೈ ಮೇಲಾಗುತ್ತದೋ ನೋಡಿಯೇ ಬಿಡೋಣ ಎಂದು ಮಹಿಷ ದಸರಾ ಆಚರಣೆ ಸಮಿತಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.