ಬೆಂಗಳೂರು : ದೀಪಾವಳಿ ಹಬ್ಬಕ್ಕೆ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರಿನಿಂದ ಕರಾವಳಿ ಭಾಗಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಮೈಸೂರು-ಬೆಂಗಳೂರು -ಮಂಗಳೂರು ವಿಶೇಷ ರೈಲು ಸಂಚರಿಸಲಿದೆ.
ದೀಪಾವಳಿ ಹಬ್ಬದ ಮುಂಚಿನ ದಿನದಂದು ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ವಿಶೇಷ ರೈಲು ಮೈಸೂರು-ಮಂಗಳೂರು ರೈಲು ಬೆಂಗಳೂರು ಮಾರ್ಗವಾಗಿ ಒಂದು ಟ್ರಿಪ್ ಸಂಚಾರ ಮಾಡುತ್ತದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
Mysore-Bangalore-Mangalore special train for passengers going to coastal areas
ರೈಲು ನಂಬರ್ 07303 ಮೈಸೂರಿನಿಂದ ಮಂಗಳೂರಿಗೆ ನವೆಂಬರ್ 10 ರಂದು ರಾತ್ರಿ 8.30ಕ್ಕೆ ಮೈಸೂರಿನಿಂದ ಹೊರಟು ನವೆಂಬರ್ 11 ರಂದು ಬೆಳಿಗ್ಗೆ 9.40 ಕ್ಕೆ ಮಂಗಳೂರು ತಲುಪಲಿದೆ. ರೈಲು ಮಾರ್ಗದಲ್ಲಿ ಮಂಡ್ಯ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ,ಪುತ್ತೂರು, ಬಂಟ್ವಾಳದಲ್ಲಿ ನಿಲುಗಡೆಯಾಗಲಿದೆ.