ಬೆಂಗಳೂರು: ನನ್ನ ತಂಗಿ, ನನ್ ಹೆಂಡ್ತಿ , ನನ್ನ ತಮ್ಮ ಮೇಲೆ ಅದಿರು ಕಳ್ಳತನ ಮಾಡಿದ್ದೇವೆ ಎಂದು ಕೇಸ್ ಹಾಕಿಸಿದ್ರು ಎಂದು ಹೆಚ್ ಡಿಕೆ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಹೆಚ್ಡಿಕೆ ಭೂಮಿ ಒತ್ತುವರಿ ತೆರವು ದ್ವೇಷದ ರಾಜಕಾರಣ ಎಂಬ ಹೇಳಿಕೆ ಡಿಕೆಶಿ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅವರ ಡಿಎನ್ಎನಲ್ಲಿ ದ್ವೇಷ ರಾಜಕಾರಣ ಇದೆ. ಮೈಸೂರಲ್ಲಿ ಏನ್ ಏನ್ ಮಾತಾಡಿದ್ರು.
Diabetic patients: ಮಧುಮೇಹ ಇರುವವರು ಬ್ಲ್ಯಾಕ್ʼಬೆರಿ ತಿಂದರೆ ಏನಾಗುತ್ತದೆ ಗೊತ್ತಾ..?
ಅವರ ತಂದೆ ಏನ್ ಏನ್ ಮಾತಾಡಿದ್ರು. ನನ್ಮೇಲೆ ಏನ್ ಏನ್ ಕೇಸ್ ಹಾಕಿಸಿದ್ರು ಗೊತ್ತಿದೆ. ನನ್ನ ತಂಗಿ, ನನ್ ಹೆಂಡ್ತಿ , ನನ್ನ ತಮ್ಮ ಮೇಲೆ ಅದಿರು ಕಳ್ಳತನ ಮಾಡಿದ್ದೇವೆ ಎಂದು ಕೇಸ್ ಹಾಕಿಸಿದ್ರು. ನಮಗೂ ಬಳ್ಳಾರಿಗೂ ಸಂಬಂಧವೇ ಇಲ್ಲ, ಆಗ ಹಾಕಿಸಿದ್ದು ದ್ವೇಷ ಅಲ್ವಾ? ಸುಮ್ಮನೆ ಆಯ್ತು ಎಂದು ಜೊತೆಗೆ ಸರ್ಕಾರ ಮಾಡಿದ್ದೆವು. ಕುಮಾರಸ್ವಾಮಿ ಮರ್ಯಾದೆಯಿಂದ ಇದ್ರೆ ಅವರಿಗೂ ಕ್ಷೇಮ ಎಂದು ಎಚ್ಚರಿಕೆ ನೀಡಿದರು.