ಹುಬ್ಬಳ್ಳಿ: ಸಮಾಜದ ಬಡವರ ಬಗ್ಗೆ ಅವರ ಏಳ್ಗೆ ಕುರಿತು ಸದಾ ಚಿಂತನೆ ಮಾಡುವುದೇ ನಾನು ಶ್ರಮಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಎಸ್ ಎಸ್ ಕೆ ಸಮಾಜದ ಯುವ ನಾಯಕ ರಾಜು ಸಾ ನಾಯಕವಾಡಿ ಹೇಳಿದರು.
ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ನಮ್ಮ ಸೋಮವಮಶ ಕ್ಷೇತ್ರೀಯ ಸಮಾಜ ಯಾವುದೇ ಕಾರಣಕ್ಕೂ ಯಾರಿಗೂ ಜು ಹುಜುರೋ ಅನ್ನುವ ಸಮಾಜ ಅಲ್ಲಾ ಶಕ್ತಿ ಶಾಲಿ ಹಾಗೂ ಸಾಹಸಕ್ಕೆ ಹೆಸರು ವಾಸಿಯಾಗಿದೆ. ಆದರೆ ಇಂದಿನ ದಿನಗಳಲ್ಲಿ ಸಮಾಜದ ಅನೇಕರಿಗೆ ಸಹಾಯ ಹಾಗೂ ಪ್ರೋತ್ಸಾಹ ಬೇಕಾಗಿದೆ. ಆದ್ದರಿಂದ ನಮ್ಮ ಸಮಾಜದ ಕೇಲ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಬಲಿ ಪಶು ಮಾಡತಾ ಇದ್ದಾರೆ. ಅವರಿಗೆ ಕೇವಲ ಅಧಿಕಾರದ ಹಪಾಹಪಿ ಯಾವುದೇ ರೀತಿಯ ಕಳಕಳಿ ಇಲ್ಲ. ಆದ್ದರಿಂದ ಅನೇಕ ಪ್ರತಿಭಾವಂತರು, ಸಾಧಕರು, ಅವಕಾಶ ವಂಚಿತರು, ವಿದ್ಯಾವಂತರು ಇದ್ದಾರೆ ಅವರಿಗೆ ಸಹಾಯ ಸಹಕಾರ ಬೇಕು. ಆದ್ದರಿಂದ ಅಧಿಕಾರಕ್ಕೆ ನಮ್ಮ ಸಮಾಜದ ಹಿರಿಯರು ಒಬ್ಬೊಬ್ಬ ನಾಯಕನ ಹಿಂದೆ ಹೋಗತಾ ಇದ್ದಾರೆ ಆದರೆ ದುರಂತವೇ ಸರಿ.
ಹುಬ್ಬಳ್ಳಿಯ ನೇಕಾರ ನಗರ, ಚೆನ್ನಪೇಟೆ, ಆನಂದನಗರ, ಮಾಧವ ನಗರ, ಸೇರಿದಂತೆ ಈ ಭಾಗದಲ್ಲಿ ಅನೇಕ ಕಡುಬಡಬರಿದ್ದು ಅವರ ಏಳ್ಗೆಗೆ ಶ್ರಮಿಸುತ್ತೇನೆ.ನಾನು ಲೋಕಸಭಾ ಚುನಾವಣೆಯಲ್ಲಿ 4426 ಮತಗಳನ್ನು ಸಮಾಜದಲ್ಲಿ ಪಡೆದ ಮೊದಲ ವ್ಯಕ್ತಿ ಆಗಿದ್ದು ಆದ್ದರಿಂದ ನನಗೆ ಯಾವುದೇ ರೀತಿಯ ಅಧಿಕಾರ ಇಲ್ಲದಿದ್ದರೂ ಸ್ವಂತ ಹಣದಲ್ಲಿ ಸಮಾಜಕ್ಕೆ ದುಡಿಯುತ್ತಿದ್ದೇನೆ.ಯಾವುದೇ ರೀತಿ ಭಾರತೀಯ ಜನತಾ ಪಕ್ಷ ಸೇರಿದಂತೆ ಇನ್ನುಳಿದ ಪಕ್ಷಗಳಿಂದ ಉನ್ನತ ಹುದ್ದೆ ಹಾಗೂ ಸ್ಥಾನ ಮಾನವನ್ನ ಸಮಾಜದ ಬೇರೆ ನಾಯಕರಿಗೆ ಕೊಟ್ಟಿಲ್ಲ. ಯಾಕೆ ಅಂತಹ ಪಕ್ಷ ಬೆಂಬಲ ಮಾಡಬೇಕು. ಕಾರಣ ಸಮಾಜದ ಕಳಕಳಿ ಇರುವವರಿಗೆ ಸಹಾಯ ಮಾಡಬೇಕು. ನಾನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ದುಡಿಯುತಿದ್ದೇನೆ ಸಮಾಜದವರ ಸಹಾಯ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು.