ತುಮಕೂರು:- ನನ್ನ ದುರಹಂಕಾರ ನನಗೆ ತೊಂದರೆ ಕೊಟ್ಟಿದೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕೆಲ ನಾಯಿ, ನರಿಗಳಿಂದ ಸಮಸ್ಯೆಯಾಗಿದೆ ಎಂದು ಬಿಜೆಪಿ ಮುಖಂಡರ ವಿರುದ್ಧ ಸೋಮಣ್ಣ ವಾಗ್ದಾಳಿ ನಡೆಸಿದರು.
ಕೆಲವು ಸಂದರ್ಭಗಳಲ್ಲಿ ನನ್ನ ದುರಹಂಕಾರ ನನಗೆ ತೊಂದರೆ ಕೊಟ್ಟಿದೆ. ಮೇಲೆ ಆಕಾಶವಿದೆ ಎಂದು ತಿಳಿಯದೆ ಅತ್ತ ಕಡೆಗೆ ಉಗುಳಿದೆ. ಅದು ನನ್ನ ಮೇಲೆ ಬಿದ್ದಿದೆ. ಅದನ್ನು ಒರೆಸಿಕೊಂಡು ಮುಂದೆ ಹೋಗುವ ಕೆಲಸ ಮಾಡುತ್ತೇನೆ’ ಎಂದರು.
‘ಬಿಜೆಪಿ ವರಿಷ್ಠರ ಭೇಟಿಗೆ ನ. 30ರಂದು ಸಮಯ ನೀಡಿದ್ದರು. ಅಂದು ಹೋಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ಮುಂದೆ ಏನಾಗುವುದೊ ಗೊತ್ತಿಲ್ಲ. ಆಗಿರುವ ತಪ್ಪುಗಳನ್ನು ಹೈಕಮಾಂಡ್ ಯಾವ ರೀತಿ ಸರಿಪಡಿಸಲಿದೆ ಎಂಬುದು ಗೊತ್ತಿಲ್ಲ. ಕೆಲ ದಿನಗಳು ನೋಡುತ್ತೇನೆ. ಎಲ್ಲವನ್ನೂ ಜನರ ಮುಂದೆ ಹೇಳುತ್ತೇನೆ. ನಂತರ ನಿರ್ಧಾರ ಮಾಡುತ್ತೇನೆ’ ಎಂದು ಹೇಳಿದರು.