ನಟಿ ಉರ್ಫಿ ಜಾವೇದ್ ಸದಾ ಟ್ರೋಲ್ ಕಾರಣದಿಂದ ಸುದ್ದಿ ಆಗುತ್ತಾರೆ. ಅವರು ಧರಿಸುವ ಬಟ್ಟೆಗಳನ್ನು ಅನೇಕರು ಟೀಕಿಸುತ್ತಾರೆ. ಅದೆಲ್ಲ ವನ್ನೂ ಬಿಟ್ಟು ಅವರೀಗ ಬೇರೊಂದು ಗಂಭೀರವಾದ ಕಾರಣದಿಂದ ಸುದ್ದಿ ಆಗುತ್ತಿದ್ದಾರೆ. ಸ್ವತಃ ಮುಸ್ಲಿಂ ಸಮುದಾಯದವರಾದ ಉರ್ಫಿ ಜಾವೇದ್ ಅವರು. ‘ನಾನು ಮುಸ್ಲಿಂ ಹುಡುಗನನ್ನು ಮದುವೆ ಆಗುವುದಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ಮಾತು ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಚಾರಗಳ ಬಗ್ಗೆ ಉರ್ಫಿ ಜಾವೇದ್ ಮಾತನಾಡಿದ್ದಾರೆ.
ತಮ್ಮ ಈ ನಿಲುವಿಗೆ ಕಾರಣ ಏನು ಎಂಬುದನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. ಬಿಗ್ ಬಾಸ್ ಒಟಿಟಿ ಶೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಫೇಮಸ್ ಆದ ಉರ್ಫಿ ಜಾವೇದ್ ಅವರು ಈಗ ತಮ್ಮ ಬೋಲ್ಡ್ ಹೇಳಿಕೆಯ ಕಾರಣದಿಂದ ಸುದ್ದಿ ಆಗಿದ್ದಾರೆ. ಉರ್ಫಿ ಜಾವೇದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ಗಳಿಗೆ ಅನೇಕ ನೆಗೆಟಿವ್ ಕಮೆಂಟ್ಗಳು ಬರುತ್ತವೆ. ಆ ರೀತಿ ಕಮೆಂಟ್ ಮಾಡುವವರ ಪೈಕಿ ಮುಸ್ಲಿಮರೇ ಹೆಚ್ಚು ಎಂದು ಅವರು ಹೇಳಿದ್ದಾರೆ.

‘ನಾನು ಮುಸ್ಲಿಂ ಹುಡುಗಿ. ಮುಸ್ಲಿಂ ಜನರಿಂದಲೇ ನನಗೆ ಹೆಚ್ಚು ದ್ವೇಷದ ಕಮೆಂಟ್ಗಳು ಬರುತ್ತಿವೆ. ಇಸ್ಲಾಂ ಧರ್ಮದ ಇಮೇಜ್ ಹಾಳುಮಾಡುತ್ತಿದ್ದೇನೆ ಅಂತ ಅವರು ನನ್ನ ಮೇಲೆ ಆರೋಪ ಹೊರಿಸುತ್ತಾರೆ’ ಎಂದು ಉರ್ಫಿ ಹೇಳಿದ್ದಾರೆ. ತಾವು ಹೇಳಿದ ರೀತಿಯೇ ಮಹಿಳೆಯರು ನಡೆದುಕೊಳ್ಳಬೇಕು ಅಂತ ಮುಸ್ಲಿಂ ಪುರುಷರು ಬಯಸುತ್ತಾರೆ. ತಮ್ಮ ಸಮುದಾಯದ ಎಲ್ಲ ಮಹಿಳೆಯರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅವರು ಬಯಸುತ್ತಾರೆ.
ಆ ಕಾರಣಕ್ಕಾಗಿ ನನಗೆ ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲ. ಆ ಧರ್ಮದ ಪ್ರಕಾರ ನಾನು ನಡೆದುಕೊಂಡಿಲ್ಲ ಎಂಬ ಕಾರಣಕ್ಕೆ ಅವರೆಲ್ಲರೂ ನನ್ನನ್ನು ಟ್ರೋಲ್ ಮಾಡುತ್ತಾರೆ’ ಎಂದಿದ್ದಾರೆ ಉರ್ಫಿ ಜಾವೇದ್. ಮದುವೆ ವಿಚಾರದಲ್ಲಿ ಉರ್ಫಿ ಜಾವೇದ್ ಅವರು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಎಂದಿಗೂ ತಾವು ಮುಸ್ಲಿಂ ಹುಡುಗನನ್ನು ಮದುವೆ ಆಗುವುದಿಲ್ಲ ಎಂದು ಹೇಳಿದ್ದಾರೆ. ‘ನನಗೆ ಇಸ್ಲಾಂನಲ್ಲಿ ನಂಬಿಕೆ ಇಲ್ಲ. ಯಾವುದೇ ಧರ್ಮವನ್ನು ನಾನು ಫಾಲೋ ಮಾಡುವುದಿಲ್ಲ.
ಹಾಗಾಗಿ ನಾನು ಪ್ರೀತಿಸುವ ಹುಡುಗನ ಧರ್ಮ ನನಗೆ ಮುಖ್ಯವಾಗುವುದಿಲ್ಲ. ನಮಗೆ ಇಷ್ಟಬಂದವರ ಜತೆ ನಾವು ಮದುವೆ ಆಗಬೇಕು’ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ. ‘ನಾನೀಗ ಭಗವದ್ಗೀತೆ ಓದುತ್ತಿದ್ದೇನೆ. ಆ ಧರ್ಮದ ಬಗ್ಗೆ ನಾನು ಹೆಚ್ಚು ತಿಳಿದುಕೊಳ್ಳಲು ಬಯಸಿ ದ್ದೇನೆ. ಇದರಲ್ಲಿ ಇರುವ ತಾರ್ಕಿಕ ವಿಚಾರಗಳ ಬಗ್ಗೆ ನನಗೆ ಹೆಚ್ಚು ಆಸಕ್ತಿ ಇದೆ. ಮೂಲಭೂತವಾದವನ್ನು ನಾನು ದ್ವೇಷಿಸುತ್ತೇನೆ. ಈ ಪ ವಿತ್ರ ಗ್ರಂಥದಲ್ಲಿ ಇರುವ ಒಳ್ಳೆಯ ಅಂಶಗಳನ್ನು ಪಡೆದುಕೊಳ್ಳಬೇಕು ಎಂದುಕೊಂಡಿದ್ದೇನೆ’ ಎಂದಿದ್ದಾರೆ ಉರ್ಫಿ ಜಾವೇದ್.
