ಬೆಂಗಳೂರು:– ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಇಂದು ಪೊಲೀಸರು ಸಲ್ಲಿಕೆ ಮಾಡಿದ್ದಾರೆ.
ಚಾರ್ಜ್ ಸೀಟ್ ನಲ್ಲಿ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ರೇಣುಕಾಸ್ವಾಮಿ ಶೆಡ್ ಒಳಗೆ ತಲುಪುತ್ತಿದ್ದಂತೆ ಕೆಲವೇ ಹೊತ್ತಿನಲ್ಲಿ ಶೆಡ್ ಒಳಗೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಎಂಟ್ರಿ ಕೊಟ್ಟಿದ್ದಾರೆ. ರೇಣುಕಾಸ್ವಾಮಿ, ರಘು ಬಿಟ್ಟು ಎಲ್ಲರನ್ನ ಹೊರಗೆ ಕಳಿಸಿದ್ರಂತೆ. ನಟ ದರ್ಶನ್ ಶೆಡ್ ಒಳಗೆ ಹೋಗುತ್ತಿದ್ದಂತೆ ಬಟ್ಟೆ ಬಿಚ್ಚಿ ಸಿನಿಮಿಯಾ ಸ್ಟೈಲ್ ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.
Relationship Tips: ಪಿರಿಯಡ್ಸ್ ವೇಳೆ ಸಂಭೋಗ ನಡೆಸಿದ್ರೆ ಏನಾಗುತ್ತೆ? ನೀವು ತಿಳಿಯಲೇಬೇಕಾದ ಸಂಗತಿಗಳು
ದರ್ಶನ್ ಹೊಡೆಯುತ್ತಿದ್ದ ಒಂದೊಂದು ಏಟಿಗೂ ರೇಣುಕಾಸ್ವಾಮಿ ವಿಲ ವಿಲ ಒದ್ದಾಡಿದ್ದ ಎನ್ನಲಾಗ್ತಿದೆ. ನೋವಿನಲ್ಲಿ ರೇಣುಕಾಸ್ವಾಮಿ ಕಿರುಚಾಟ ಕಂಡು ಆರೋಪಿಗಳಾದ ಅನು, ಜಗ್ಗ, ರವಿ ಫುಲ್ ಗಾಬರಿ ಆಗಿದ್ದರಂತೆ. ಸದ್ಯ ಮೂವರ ಹೇಳಿಕೆಯನ್ನು ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗ್ತಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿ ಪೊಲೀಸರ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದೆ. ದರ್ಶನ್ ಮತ್ತು ಗ್ಯಾಂಗ್ ಅನ್ನು ಸರಿಯಾಗಿ ತನಿಖೆ ನಡೆಸಿದ್ದು, ಇಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಆರೋಪಿ ದರ್ಶನ್ ಹಾಗೂ ಪವಿತ್ರಾ ಗೌಡಗೆ ಸಂಬಂಧಿಸಿದಂತೆ ಪೊಲೀಸರಿಗೆ ಹಲವಾರು ಸಾಕ್ಷಿಗಳು ಸಿಕ್ಕಿದ್ದು, ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದೆ.
ರೇಣುಕಾಸ್ವಾಮಿ ಮೇಲಿನ ಭೀಕರ ಹಲ್ಲೆ ಬಗ್ಗೆ ಚಾರ್ಜ್ ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆಯ ಭೀಕರತೆ ಕೂಡ ಬಯಲಾಗಿದೆ. ರೇಣುಕಾಸ್ವಾಮಿ ಮೃತದೇಹದ ಮೇಲೆ 39 ಗಾಯದ ಗುರುತು ಪತ್ತೆ ಆಗಿದ್ದು, ಅಷ್ಟೇ ಅಲ್ಲದೆ ಆರೋಪಿಗಳ ಹೊಡೆತಕ್ಕೆ ರೇಣುಕಾಸ್ವಾಮಿ ಎದೆಯ ಮೂಳೆ ಮುರಿದಿದ್ದು, ತಲೆಗೆ ಗಾಯವಾಗಿದೆ ಎಂದು ಚಾರ್ಜ್ಶೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗ್ತಿದೆ.
ಆರೋಪಿಗಳೆಲ್ಲಾ ಸೇರಿ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ ಎನ್ನಲಾಗ್ತಿದೆ. ರೇಣುಕಾಸ್ವಾಮಿ ಮರ್ಮಾಂಗಕ್ಕೆ ಹಲ್ಲೆ ಮಾಡಿದ್ದು, ಕರೆಂಟ್ ಶಾಕ್ ಕೊಟ್ಟು ಅತಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಅಷ್ಟೇ ಅಲ್ಲದೇ ಪವಿತ್ರಾ ಗೌಡ ಕೂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದು ದೃಢಪಟ್ಟಿದೆ ಎಂದು ವರದಿ ಆಗಿದೆ.