ಬೆಂಗಳೂರು: ಆನೇಕಲ್ ನ ಚಂದಾಪುರ ಪುರಸಭೆ ಮತ್ತು ಹೆಬ್ಬಗೋಡಿ ನಗರಸಭೆ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಮತಯಾಚನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು ಪ್ರಜಾಪಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳು ಅತ್ಯಂತ ಮಹತ್ವ ಹೊಂದಿದೆ. ಪುರಸಭೆ ಮತ್ತು ನಗರಸಭೆ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಹಲವು ಯೋಜನೆಗಳನ್ನು ರೂಪಿಸಿದ್ದು ಜನರು ಅಭ್ಯರ್ಥಿಗಳ ಕೈ ಹಿಡಿಯುವ ಭರವಸೆಯಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಗೃಹ ಸಚಿವ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ , ಶಾಸಕರಾದ ಶ್ರೀ ಶಿವಣ್ಣ, DCC ಅಧ್ಯಕ್ಷರಾದ ಕೃಷ್ಣಪ್ಪ, ಮುಖಂಡ ಆರ್.ಕೆ. ರಮೇಶ್, ಮಾಜಿ ಮೇಯರ್ ಬಿ.ಎನ್ ಮಂಜುನಾಥರೆಡ್ಡಿ , ಬ್ಲಾಕ್ ಅಧ್ಯಕ್ಷ ರಘುಪತಿ ರೆಡ್ಡಿ, ಲಿಂಗಣ್ಣ, ಗೋಪಾಲರೆಡ್ಡಿ, ಪುರುಷೋತ್ತಮ್, ಭಾರ್ಗವ್ ರೆಡ್ಡಿ , ಅಭ್ಯರ್ಥಿಗಳು, ಇತರ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತ ಬಂಧುಗಳು ಹಾಜರಿದ್ದರು.
