ವಿಜಯನಗರ : ಐತಿಹಾಸಿಕ ವಿಜಯನಗರ ಹಂಪಿ ಉತ್ಸವಕ್ಕೆ ಸಜ್ಜಾಗುತ್ತಿದೆ. ಇದೇ ಫೆ.28ರಂದು ಅದ್ದೂರಿಯಾದ ಹಂಪಿ ಉತ್ಸವಕ್ಕೆ ಚಾಲನೆ ಸಿಗಲಿದ್ದು, ಮೂರು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವ ಗತವೈಭವನ್ನು ಮರುಕಳಿಸಲಿದೆ.
ಇನ್ನೂ ಹಂಪಿ ಉತ್ಸವದ ವೀಕ್ಷಣೆಗಾಗಿ ಜಿಲ್ಲಾಡಳಿತ ಈ ಬಾರಿ ವಿಶೇಷ ಸೌಲಭ್ಯ ಒದಗಿಸಿದ್ದು, ಮುಕ್ತಿಧಾಮದ ಬಡಜನರು ಮತ್ತು ಇಂದಿರಾ ನಗರದ ಬಡವರಿಗೆ ವಿವಿಐಪಿ ಪಾಸ್ ವಿತರಣೆ ಮಾಡಲಾಗಿದೆ. ಹಂಪಿ ಉತ್ಸವದ ನಿಮಿತ್ತ ವಿಜಯನಗರ ಜಿಲ್ಲಾಡಳಿತವು VVIP ಪಾಸ್ ಬಡವರಿಗೆ ನೀಡಿ ಆಹ್ವಾನ ಮಾಡಿದ್ದು ಈ ಬಾರಿಯ ವಿಶೇಷವಾಗಿದೆ.
ನಾಳೆಯಿಂದ ಮೂರು ದಿನಗಳ ನಡೆಯಲಿರುವ ಹಂಪಿ ಉತ್ಸವಕ್ಕೆ ಆಹ್ವಾನಕ್ಕೆ ವಿಜಯನಗರ ಜಿಲ್ಲಾಧಿಕಾರಿಗಳಾದ ಎಂಎಸ್ ದಿವಾಕರ್ ಅವರು, ಹೊಸಪೇಟೆಯ ಮುಕ್ತಿಧಾಮ ಮತ್ತು ಇಂದಿರಾ ನಗರದ ಬಡಜನರಿಗೆ VVIP ಪಾಸ್ ವಿತರಣೆ ಮಾಡಿ ಹಂಪಿ ಉತ್ಸವಕ್ಕೆ ಆಹ್ವಾನಿಸಿದರು.