ಬೆಂಗಳೂರು: ಕಳೆದ ಕೆಲವು ತಿಂಗಳಿಂದ ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಇದೆ. ಅತ್ತ ಬಸ್ ಏರಿಕೆಯಿಂದ ಚಿಂತೆಗೀಡಾದ ಜನರಿಗೆ ಇದೀಗ ಮೆಟ್ರೋ ದರ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಮೆಟ್ರೋ ದರ ಏರಿಕೆಯಿಂದಾಗಿ ಸದ್ಯ ಜನರೂ ಕೂಡಾ ರೊಚ್ಚಿಗೆದ್ದಿದ್ದು,
ಹಲವರು ಇಷ್ಟೊಂದು ದರ ಏರಿಕೆ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಇಂದು ಸಂಸತ್ನಲ್ಲಿ ಪ್ರಸ್ತಾಪಿಸಿದ್ದು, ಮೆಟ್ರೋ ದರ ಏರಿಕೆಯು ಬೆಂಗಳೂರಿನ ಮಧ್ಯಮ ವರ್ಗದ ಮೇಲೆ ಬೀರುತ್ತೆ. ಈ ಬಗ್ಗೆ ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿದರು.
ಹಾರ್ಟ್ ಅಟ್ಯಾಕ್ ತಡೆಯಲು ಈ ಬೀಜವೇ ಮದ್ದು: ನೀರಲ್ಲಿ ನೆನಸಿಟ್ಟು ತಿಂದ್ರೆ ಶುಗರ್-ಬಿಪಿ ಸಹ ಇರತ್ತೆ ಕಂಟ್ರೋಲ್!
ಇಂದು ಸಂಸತ್ತಿನಲ್ಲಿ ನಡೆದ ಶೂನ್ಯ ವೇಳೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣದ ಅಲ್ಪ ದೂರದ ಪ್ರಯಾಣ ದರ ಶೇ.100ರಷ್ಟು ಏರಿಕೆಯಾಗಿದೆ. ಈ ರೀತಿಯ ದರ ಏರಿಕೆಯನ್ನು ದೇಶದ ಇತರ ನಗರಗಳ ಮೆಟ್ರೋ ದರಕ್ಕೆ ಹೋಲಿಸಿ ನೋಡಿದರೆ ಬೆಂಗಳೂರು ನಮ್ಮ ಮೆಟ್ರೋ ಅತ್ಯಂತ ದುಬಾರಿಯಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪರಿಸರ ಸ್ನೇಹಿಯಾಗಿಸಬೇಕು ಮತ್ತು ಜನಪ್ರಿಯಗೊಳಿಸಬೇಕು. ಆದ್ರೆ ಈ ರೀತಿ ದರ ಏರಿಕೆ ಮಾಡಿರುವುದರಿಂದ ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ ಎಂದರು.
ಜನಸಾಮಾನ್ಯರ ಪ್ರಯಾಣ ಅನುಭವವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಮೆಟ್ರೋ ದರ ಏರಿಕೆಯನ್ನು ಪುನರ್ ಪರಿಶೀಲಿಸಬೇಕು. ಭದ್ರತೆ ಹಾಗೂ ವ್ಯವಹಾರಿಕತೆಯನ್ನು ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಅಗತ್ಯ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಮಂಡಳಿಗೆ ಪರಿಶೀಲಿಸುವಂತೆ ಸ್ಪೀಕರ್ ಮೂಲಕ ತಿಳಿಸಿದರು.