ರಾಂಚಿ: ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಸಾವು ಕಂಡಿದ್ದಾಳೆ. ಇದರ ಬೆನ್ನಲ್ಲಿಯೇ ಮಗುವನ್ನು ಬೇರೊಬ್ಬರಿಗೆ ಮಾರಾಟ ಮಾಡಿದ ಪ್ರಕರಣದಲ್ಲಿ ರಾಂಚಿನ ಪೊಲೀಸರು ಇಬ್ಬರು ನರ್ಸ್ಗಳು ಸೇರಿದಂತೆ ಮೂವರು ಮಹಿಳೆಯನ್ನು ಬಂಧಿಸಿದ್ದಾರೆ. ಸಂಜೆಯ ವೇಳೆಗೆ ಇವರನ್ನು ರಾಂಚಿಯಲ್ಲಿಯೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಮನೋಹರಪುರದಲ್ಲಿ ಪ್ರಕರಣ ದಾಖಲಾಗಿದೆ. ಮುನ್ನಿ ಚಾಂಪಿಯಾ ಎಂಬ ಯುವತಿ ಹೆರಿಗೆಯಾದ ಕೂಡಲೇ ಸಾವನ್ನಪ್ಪಿದ್ದಾಳೆ. ಈ ಪ್ರದೇಶದಲ್ಲಿ ನರ್ಸ್ ಆಗಿರುವ ಇಬ್ಬರು ಮಹಿಳೆಯರು ಮನೆಯಲ್ಲಿಯೇ ಆಕೆಗೆ ಹೆರಿಗೆ ಮಾಡಿಸಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
Namma Metro: ಇನ್ಮುಂದೆ ಮೆಟ್ರೋದಲ್ಲೂ ನಡೆಯಲಿದೆ ಶೂಟಿಂಗ್ – ಬಿಎಂಆರ್ಸಿಎಲ್ ಗ್ರೀನ್ ಸಿಗ್ನಲ್
ಗಂಡು ಮಗುವಿಗೆ ಜನ್ಮ ನೀಡಿದ್ದ ಆಕೆ, ಸಾವು ಕಂಡಿದ್ದರು. ಆ ಬಳಿಕ ಈ ಇಬ್ಬರು ನರ್ಸ್ಗಳು ಮಗುವನ್ನು ನೆರೆಯ ಜಿಲ್ಲೆಯಲ್ಲಿ ವಾಸಿಸುವ ಗುಡ್ಡಿ ಗುಪ್ತಾ ಎಂಬ ಮಹಿಳೆಗೆ ಮಾರಾಟ ಮಾಡಿದ್ದಾರೆ. ಆದರೆ, ದಿನಗಳು ಕಳೆದರೂ ಮಗು ಒಂದೇ ಸಮನೆ ಅಳುವುದು ಹಾಗ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ಗುಡ್ಡಿ ಗುಪ್ತಾ ಮಗುವನ್ನು ಹಿಂತಿರುಗಿಸಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಶುಗಳನ್ನು ಖರೀದಿಸಿದ ಮಹಿಳೆ ಮತ್ತು ಮಾರಾಟ ಮಾಡಿದ ಇಬ್ಬರು ನರ್ಸ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಉಪ ಪೊಲೀಸ್ ಆಯುಕ್ತರು, ಹೆರಿಗೆ ಬಳಿಕ ಮೃತಪಟ್ಟ ಮಹಿಳೆ ಅವಿವಾಹಿತೆಯಾಗಿದ್ದು, ತಂದೆ-ತಾಯಿಯ ಮರಣದ ನಂತರ ಆಕೆ ತನ್ನ ತಾಯಿಯ ಸಂಬಂಧಿಯೊಂದಿಗೆ ವಾಸಿಸುತ್ತಿದ್ದಳು ಎಂದು ತಿಳಿಸಿದ್ದಾರೆ.