ಬೆಂಗಳೂರು:- ತಾಯಿ, ಮಗು ಸಜೀವ ದಹನ ಪ್ರಕರಣ ಸಂಬಂಧ ಬೆಸ್ಕಾಂನ ಐವರು ಸಿಬ್ಬಂದಿ ಅರೆಸ್ಟ್ ಮಾಡಲಾಗಿದೆ.
ಕಾರ್ಯನಿರ್ವಾಹಕ ಅಭಿಯಂತರ ಶ್ರೀರಾಮ್, ಸಹಾಯಕ ಕಾರ್ಯನಿರ್ವಕ ಅಭಿಯಂತರ ಸುಬ್ರಹ್ಮಣ್ಯ, ವೈಟ್ ಫೀಲ್ಡ್ ವಿಭಾಗದ ಸಹಾಯಕ ಅಭಿಯಂತರ ಚೇತನ್, ವೈಟ್ ಫೀಲ್ಡ್ ವಿಭಾಗದ ಕಿರಿಯ ಅಭಿಯಂತರ ರಾಜಣ್ಣ, ಸ್ಟೇಷನ್ ಆಪರೇಟರ್ ಮಂಜುನಾಥ್ ಬಂಧಿತರಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.
ಬೆಂಗಳೂರಿನ ವೈಟ್ಫೀಲ್ಡ್ನ ಕಾಡುಗೋಡಿಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಎರಡು ಅಮಾಯಕ ಜೀವಗಳು ಬಲಿಯಾಗಿದ್ದವು. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಬಾಣಂತಿ ಸೌಂದರ್ಯ (23) ಮತ್ತು 9 ತಿಂಗಳ ಮಗು ಲೀಲಾ ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು.