ಹುಬ್ಬಳ್ಳಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭೂತಪೂರ್ವ ಗೆಲುವಿಗೆ ಮೋದಿಜೀಯವರ ಸಮರ್ಥ ನಾಯಕತ್ವ, ಭ್ರಷ್ಟಾಚಾರ ರಹಿತ ದಕ್ಷ ಆಡಳಿತ ಹಾಗೂ ಬಿಜೆಪಿಯ ಅಭಿವೃದ್ಧಿಪರ ನಿಲುವೇ ಪ್ರಮುಖ ಕಾರಣ ಎಂದು ವಿಧಾನಸಭಾ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಹೇಳಿದರು. ಹರಿಯಾಣ, ಮಹಾರಾಷ್ಟ್ರದ ನಂತರ ಈಗ ದೆಹಲಿಯಲ್ಲೂ ಬಿಜೆಪಿ ಪಕ್ಷವು ಭರ್ಜರಿ ಜಯ ಸಾಧಿಸಿದೆ. ಇದು ಮೋದಿಜೀಯವರ ನಾಯಕತ್ವ ಹಾಗೂ ಬಿಜೆಪಿ ಪಕ್ಷದ ಮೇಲೆ ದೇಶದ ಜನರಿಗಿರುವ ಭರವಸೆಯನ್ನು ಒತ್ತಿ ಹೇಳಿದೆ. ಅಲ್ಲದೇ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಹೀನಾಯ ಸೋಲು ಇಂಡಿ ಮೈತ್ರಿಕೂಟಕ್ಕೆ ಯಾವುದೇ ಭವಿಷ್ಯವಿಲ್ಲ ಎಂಬುದನ್ನೂ ನಿರೂಪಿಸಿದೆ. ಸಮಾಜ ಕಲ್ಯಾಣ ಕಾರ್ಯಕ್ರಮಗಳು, ಮೂಲಸೌಕರ್ಯಗಳ ಅಭಿವೃದ್ಧಿ, ದೇಶದ ರಕ್ಷಣೆ ವಿಚಾರಗಳ ಮುಂದೆ ಭ್ರಷ್ಟಾಚಾರಿಗಳ ನಕಲಿ ಗ್ಯಾರಂಟಿಗಳು ಹಾಗೂ ಬಿಟ್ಟಿ ಭಾಗ್ಯಗಳ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂಬುದು ದೆಹಲಿ ಫಲಿತಾಂಶದಿಂದ ಸಾಬೀತಾಗಿದೆ.
ದಕ್ಷಿಣ ಕುಂಭಮೇಳಕ್ಕೆ ಸಕಲ ಸಿದ್ದತೆ ; ತ್ರಿವೇಣಿ ಸಂಗಮಕ್ಕೆ ನಿರ್ಮಲಾನಂದನಾಥ ಶ್ರೀಗಳ ಭೇಟಿ
ಗ್ಯಾರಂಟಿ ಹೆಸರಿನಲ್ಲಿ ನಕಲಿ ಆಶ್ವಾಸನೆಗಳನ್ನು ನೀಡಿ ರಾಜ್ಯದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷವು, ಇಂದು ರಾಜ್ಯದ ಆರ್ಥಿಕ ಸ್ಥಿತಿಯನ್ನು ಹೇಗೆಲ್ಲಾ ಹದಗೆಡಿಸಿದೆ ಎಂಬುದನ್ನು ನಾವೆಲ್ಲಾ ನೋಡುತ್ತಿದ್ದೇನೆ. ಗ್ಯಾರಂಟಿ ಕಾರ್ಯಕ್ರಮಗಳಿಗೆ ಹಣ ಹೊಂದಿಸಲು, ಪೆಟ್ರೋಲ್-ಡೀಸೆಲ್, ಹಾಲು, ಮದ್ಯ, ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ, ಬಸ್ ದರ, ನೋಂದಣಿ ಶುಲ್ಕ, ಮುಂದ್ರಾಂಕ ಶುಲ್ಕ ಸೇರಿದಂತೆ ಎಲ್ಲಾ ಸೇವೆಗಳ ಹಾಗೂ ವಸ್ತುಗಳ ಬೆಲೆ ಹೆಚ್ಚಿಸಿ ಜನರನ್ನು ಲೂಟಿ ಮಾಡುತ್ತಿದೆ. ಮೊನ್ನೆ ತಾನೇ ಜನನ – ಮರಣ ಪ್ರಮಾಣ ಪತ್ರದ ಶುಲ್ಕವನ್ನೂ ಏಕಾಏಕಿ 10 ಪಟ್ಟು ಹೆಚ್ಚಿಸಿ, ಹುಟ್ಟು-ಸಾವಿನಲ್ಲೂ ಈ ಕಾಂಗ್ರೆಸ್ ಸರ್ಕಾರ ಕಲೆಕ್ಷನ್ಗೆ ಮುಂದಾಗಿದೆ. ಈಗಾಗಲೇ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷದ ನಿಜಬಣ್ಣ ಬಯಲಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡಿಗರೂ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಹೀನಾಯವಾಗಿ ಸೋಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.