ಪಾಟ್ನಾ: 2024ರಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸರ್ಕಾರ ರಚಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇಂದು ಜಮ್ಮುವಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಎಷ್ಟೇ ಪಕ್ಷಗಳು ಪ್ರತಿಪಕ್ಷಗಳ ಸಭೆಗೆ ಬಂದರೂ ಅವು ಎಂದಿಗೂ ಒಂದಾಗಲು ಸಾಧ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ
ಇಂದು ಪಾಟ್ನಾದಲ್ಲಿ ಫೋಟೋ ಸೆಷನ್ ಮಾತ್ರ ನಡೆಯುತ್ತಿದೆ. ಅವರು(ಪ್ರತಿಪಕ್ಷಗಳು) ಎಂದಿಗೂ ಒಂದಾಗಲು ಸಾಧ್ಯವಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಪ್ರಧಾನಿ ಮೋದಿ ಮತ್ತೊಮ್ಮೆ ಸರ್ಕಾರ ರಚಿಸುತ್ತಾರೆ” ಎಂದು ಎರಡು ದಿನಗಳ ಭೇಟಿಗಾಗಿ ಜಮ್ಮುವಿಗೆ ಆಗಮಿಸಿರುವ ಅಮಿತ್ ಶಾ ಹೇಳಿದ್ದಾರೆ.

Free Devara Darshana: ವೃದ್ಧರಿಗೆ ದೇಗುಲಗಳಲ್ಲಿ ಫ್ರೀ ವ್ಯವಸ್ಥೆ ಸದ್ಯದಲ್ಲೇ ಜಾರಿ : ಸಚಿವ ರಾಮಲಿಂಗಾರೆಡ್ಡಿ
2024 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ಎದುರಿಸಲು ಒಗ್ಗಟ್ಟಿನ ಪ್ರತಿಪಕ್ಷಗಳ ಮೈತ್ರಿಕೂಟ ರೂಪಿಸುವ ಉದ್ದೇಶದಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಯೋಜಿಸಿದ್ದ ವಿರೋಧ ಪಕ್ಷದ ನಾಯಕರ ಸಭೆ ಇಂದು ಪಾಟ್ನಾದಲ್ಲಿ ನಡೆಯುತ್ತಿದ್ದು, 15ಕ್ಕೂ ಹೆಚ್ಚು ವಿರೋಧ ಪಕ್ಷಗಳು ಭಾಗವಹಿಸಿವೆ.
