ವಿಜಯಪುರ: ಮಾಜಿ ಸಚಿವ ರೇಣುಕಾಚಾರ್ಯಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಿರುಗೇಟು ನೀಡಿದ್ದಾರೆ. ವಿಜಯಪುರ ದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ , ಲಪುಟ ನನ್ನ ಮಕ್ಕಳದ್ದು ಪ್ರತಿಕ್ರಿಯೆ ನನಗೆ ಕೇಳಬೇಡಿ. ರಾಜಕಾರಣದಲ್ಲಿ ಏನಾದರೂ ಮಾನ ಮರ್ಯಾದ ಇದ್ದವರೆ ಬಗ್ಗೆ ಮಾತ್ರ ನನಗೆ ಕೇಳಿ ಎಂದಿದ್ದಾರೆ. ಇದೇ ವೇಳೆ ಮಂಡ್ಯದಲ್ಲಿ ಯತ್ನಾಳ್ ವಿರುದ್ದ ರಕ್ತ ಚಳುವಳಿ ವಿಚಾರವಾಗಿ ಮಾತನಾಡಿ, ಮಾಧ್ಯಮದವರು ಆ ರಕ್ತ ಈ ರಕ್ತ ಎಂದು ಸುದ್ದಿ ಮಾಡಿದರು. ಅದು ಯಾವ ರಕ್ತಾ ಇದೆಯೋ ಯಾರಿಗೆ ಗೊತ್ತು. ಅದು ಅವರದ್ದೇ ರಕ್ತ ಇದೆಯೋ ಮತ್ಯಾರದ್ದೋ ರಕ್ತ ಇದೆಯೋ ಗೊತ್ತಿಲ್ಲ. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನನ್ನು ಆಯ್ಕೆ ಮಾಡಿಲ್ಲ. ಅವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ನನ್ನ ವಿರುದ್ಧ ರಕ್ತ ಚಳುವಳಿ ಏನು ಮಾಡುತ್ತಾರೆ. ಮೊದಲು ಮಂಡ್ಯದಲ್ಲಿ ನಮ್ಮ ಪಕ್ಷದ ನಾಲ್ವರನ್ನು ಶಾಸಕರನ್ನಾಗಿ ಮಾಡಿ ಎಂದರು. ಮಂಡ್ಯದಲ್ಲಿರುವ ಭೂಕನಕೆರೆ ವಿಜಯೇಂದ್ರನ ಅಪ್ಪನ ಊರು. ಬೂಕಕೆರೆಯಲ್ಲಿಯೇ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರೇ ಇಲ್ಲ. ಅವರು ನನಗೆ ರಕ್ತದಲ್ಲಿ ಪತ್ರ ಬರೆಯುತ್ತಾರಂತೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರಗೆ ಕುಟುಕಿದರು.
ಬೆಂಗೇರಿ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸುವಂತೆ ಸಚಿವರಿಗೆ ಮನವಿ
ಶಿಫಾರಸ್ಸು ಮಾಡಲಿ, ಕೋರ್ ಕಮಿಟಿಯಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳಲಿ. ನಾವು ವಕ್ಪ್ ಹೋರಾಟವನ್ನು ಕೈ ಬಿಡಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಹೊಂದಾಣಿಕೆ ಇಲ್ಲ. ಹೊಂದಾಣಿಕೆ ಇದ್ದಿದ್ದರೆ ನನ್ನ ಸಕ್ಕರೆ ಕಾರ್ಖಾನೆಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ನನ್ನ ಮೇಲೆ 42 ಕೇಸುಗಳನ್ನ ಸಿಎಂ ಹಾಗೂ ಡಿಸಿಎಂ ಹಾಕುತ್ತಿರಲಿಲ್ಲ ಎಂದರು.