ಬೆಂಗಳೂರು: ವಿಜಯನಗರ ವ್ಯಾಪ್ತಿಯ ಹೊಸ ಗುಡ್ಡದಹಳ್ಳಿಯ ನೆಹರೂ ರಸ್ತೆಯ ಜಿ. ಸ್ಟ್ರೀಟ್ ಹಾಗೂ ಇತರೆ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಂ. ಕೃಷ್ಣಪ್ಪ ಚಾಲನೆ ನೀಡಿದರು. ಮಳೆಯಿಂದಾಗಿ ಹಾನಿಗೊಳಗಾದ ರಸ್ತೆ ಕಾಮಗಾರಿಗಳನ್ನು ಪ್ರಾರಂಭಿಸಲು ಸೂಚನೆ ನೀಡಲಾಯಿತು. ಅಲ್ಲದೆ, ತ್ವರಿತವಾಗಿ ಕಾಮಗಾರಿಗಳು ಪೂರ್ಣಗೊಳ್ಳಬೇಕು, ಕಾಮಗಾರಿಗಳನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ಸ್ಥಗಿತಗೊಳಿಸದೆ ಸರಿಯಾದ ಅವಧಿಗೆ ಪೂರ್ಣಗೊಳಿಸಬೇಕು, ಇದರಲ್ಲಿ ಯಾವುದೇ ವ್ಯವಸ್ಥೆಗಳಾಬೇಕಾದರೂ ನಮ್ಮನ್ನು ಸಂಪರ್ಕಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
